Kannada NewsKarnataka NewsLatest
*ಬಾಲಕನ ಮೇಲೆ ಲೈಂಗಿಕ ದೌರ್ಜನ್ಯ; ಮೌಲ್ವಿ ಬಂಧನ*

ಪ್ರಗತಿವಾಹಿನಿ ಸುದ್ದಿ; ಕುಮಟಾ: ಕುರಾನ್ ಓದಲು ಬರುತಿದ್ದ ಅಪ್ರಾಪ್ತ ಬಾಲಕನ ಮೇಲೆ ಮೌಲ್ವಿಯೊಬ್ಬ ಮಸೀದಿಯಲ್ಲಿ ಲೈಂಗಿಕ ದೌರ್ಜನ್ಯ ವೆಸಗಿದ ಘಟನೆ ಉತ್ತರ ಕನ್ನಡ ಜಿಲ್ಲೆಯ ಕುಮಟಾ ನಗರದಲ್ಲಿ ನಡೆದಿದೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ಕುಮಟಾ ಠಾಣೆ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ. ಪಶ್ಚಿಮ ಬಂಗಾಳ ಮೂಲದ ಅಬ್ಬುಸ್ ಸಮದ್ ಜಿಯಾಯಿ (25) ಬಂಧಿತ ಮೌಲ್ವಿ.
ಕುರಾನ್ ಓದಲು ಮಸೀದಿಗೆ ಬಂದಿದ್ದ ಬಾಲಕನಿಗೆ ಆರೋಪಿ ನಿನ್ನೆ ರಾತ್ರಿ ಲೈಂಗಿಕ ದೌರ್ಜನ್ಯವೆಸಗಿದ್ದ. ಈ ಕುರಿತು ಬಾಲಕನ ತಂದೆಯ ದೂರಿನನ್ವಯ ಮೌಲ್ವಿಯನ್ನು ಕುಮಟಾ ಠಾಣೆ ಪೊಲೀಸರು ಬಂಧಿಸಿದ್ದು, ಪೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.



