Latest

ಚುನಾವಣಾ ಆಯೋಗದಿಂದ ಶಿವಸೇನಾ ಹೆಸರು, ಚಿಹ್ನೆ ಮುಟ್ಟುಗೋಲು

ಪ್ರಗತಿವಾಹಿನಿ ಸುದ್ದಿ, ಮುಂಬೈ: ಮಹಾರಾಷ್ಟ್ರ ಸಿಎಂ ಏಕನಾಥ್‌ ಶಿಂಧೆ ಹಾಗೂ ಮಾಜಿ ಸಿಎಂ ಉದ್ಧವ್‌ ಠಾಕ್ರೆ ನಡುವಿನ ತಿಕ್ಕಾಟದ ಪರಿಣಾಮ ಶಿವಸೇನೆ ಹೆಸರು, ಚಿಹ್ನೆಯನ್ನು ಚುನಾವಣಾ ಆಯೋಗ ಮುಟ್ಟುಗೋಲು ಹಾಕಿದೆ.

 ಈ ಕುರಿತು ಚುನಾವಣಾ ಆಯೋಗ ಮಧ್ಯಂತರ ಆದೇಶ ನೀಡಿದ್ದು,  ಅಂಧೇರಿ ಪೂರ್ವ ಉಪಚುನಾವಣೆಗೆ ಪಕ್ಷದ ಹೆಸರು ಮತ್ತು ಚಿಹ್ನೆಯನ್ನು ಬಳಸಲು ಅಂತಿಮ ಆದೇಶ ನೀಡುವವರೆಗೆ ಈಗಿರುವ ಚಿಹ್ನೆ ಬಳಕೆಗೆ ಅನುಮತಿಸದಿರಲು ಚುನಾವಣಾ ಆಯೋಗ ನಿರ್ಧರಿಸಿದೆ.

Home add -Advt

ಬಣದವರು ತಾವು ‘ನೈಜ’ ಶಿವಸೇನೆಯನ್ನು ಪ್ರತಿನಿಧಿಸುತ್ತೇವೆ ಎಂದು ಹೇಳಿಕೊಂಡಿದ್ದು, ಪಕ್ಷದ ಹೆಸರು ಮತ್ತು ಬಿಲ್ಲು ಮತ್ತು ಬಾಣ ಚಿಹ್ನೆಯ ವಿಶೇಷ ಬಳಕೆಗೆ ಕಳೆದ ಜೂನ್ ನಿಂದಲೇ ಹಕ್ಕು ಸಾಧಿಸುತ್ತ  ಬಂದಿದ್ದಾರೆ.

ಮಹಾರಾಷ್ಟ್ರದ ಅಂಧೇರಿ ಪೂರ್ವ ವಿಧಾನಸಭಾ ಕ್ಷೇತ್ರ ಸೇರಿದಂತೆ ಈ ವಾರ ಉಪಚುನಾವಣೆ ಘೋಷಣೆಯಾಗಿರುವುದರಿಂದ ಈ ವಿಷಯದಲ್ಲಿ ನಿರ್ಧಾರ ಕೈಗೊಳ್ಳುವ ತುರ್ತು ಅಗತ್ಯವಿದೆ ಎಂದು ಚುನಾವಣಾ ಆಯೋಗ ತನ್ನ ಆದೇಶದಲ್ಲಿ ಹೇಳಿದೆ.

ನವೆಂಬರ್ 3 ರಂದು ನಡೆಯಲಿರುವ ಉಪಚುನಾವಣೆಗೆ ಶುಕ್ರವಾರ ನಾಮಪತ್ರ ಸಲ್ಲಿಕೆ ಆರಂಭವಾಗಿದ್ದು, ಅಕ್ಟೋಬರ್ 14 ರವರೆಗೆ ನಡೆಯಲಿದೆ.

ಪುನೀತ್ ರಾಜ್ ಕುಮಾರ್ ಕನಸಿನ ಪ್ರಾಜೆಕ್ಟ್ ‘ಗಂಧದಗುಡಿ’ ಟ್ರೇಲರ್ ಬಿಡುಗಡೆ

Related Articles

Back to top button