Belagavi NewsBelgaum NewsKannada NewsKarnataka NewsPolitics

ಸಿಎಂ ಆಗುವ ತಯಾರಿ ಇದೆ ನಮ್ಮದು, ಆದರೆ…: ಸತೀಶ್ ಜಾರಕಿಹೊಳಿ

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ : ನಾನೆಲ್ಲೂ ಸಿಎಂ ಸ್ಥಾನವನ್ನು ಕ್ಲೇಮ್ ಮಾಡಿಲ್ಲ. ಇದರಲ್ಲಿ ಗುದ್ದಾಟ, ಕುಸ್ತಿ ಮಾಡೋ ಅವಶ್ಯಕತೆ ಇಲ್ಲ ಎಂದು ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ‌ ಸಚಿವ ಎಂ.ಬಿ.ಪಾಟೀಲ್ ಹೇಳಿಕೆಗೆ ಪ್ರತಿಕ್ರಿಯಿಸಿದ್ದಾರೆ.

ಭಾನುವಾರ ಬೆಳಗಾವಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದರು. ಮುಂದಿನ ಸಿಎಂ ಸತೀಶ್ ಜಾರಕಿಹೊಳಿ‌ ಎನ್ನುವ ಅಭಿಯಾನ ವಿಚಾರಕ್ಕೆ ಉತ್ತರಿಸಿದ ಅವರು, ಯಾರೋ ಒಬ್ಬರು ಪೋಸ್ಟ್ ಹಾಕಿದರೆ ರಾಜ್ಯದ ಅಭಿಪ್ರಾಯ ಆಗುವುದಿಲ್ಲ. ಎಲ್ಲಾ ಕಡೆ ಆರಂಭವಾಗಿದ್ದಾಗ ನಮ್ಮವರು ಹಾಕಿದ್ದಾರೆ. ರಾಜ್ಯದಲ್ಲಿ ಅಂತಹ ಸನ್ನಿವೇಶ ಇಲ್ಲ. ಸಿಎಂ ಸಿದ್ದರಾಮಯ್ಯ ಮುಂದುವರೆಯುತ್ತಾರೆ ಎನ್ನುವ ನಂಬಿಕೆ ಇದೆ ಎಂದರು.

Home add -Advt

ದೆಹಲಿಗೆ ಬೇರೆ ಕೆಲಸ ಇರುತ್ತೆ ಹೋಗಿರುತ್ತೇವೆ. ಎಂ ಬಿ ಪಾಟೀಲ್, ಶಿವಾನಂದ ಪಾಟೀಲ, ಆರ್.ವಿ. ದೇಶಪಾಂಡೆ ಮೊದಲಾದವರು ತಮ್ಮ ಅಭಿಪ್ರಾಯ ಹೇಳಿದ್ದಾರೆ. ಸಿದ್ದರಾಮಯ್ಯ ಪರ ನ್ಯಾಯ ಸಿಗುತ್ತೆ ಎನ್ನುವ ನಂಬಿಕೆ ಇದೆ. ಸಿಎಂ ಬದಲಾವಣೆ ಪ್ರಶ್ನೆ ಬರಲ್ಲ ಎನ್ನುವ ವಿಶ್ವಾಸ ಇದೆ. ಈಗ ನಾನು ಸಿಎಂ ಕನಸು ಕಂಡಿಲ್ಲ ಎಂದು ಸ್ಪಷ್ಟಪಡಿಸಿದರು.

ಈಗಾಗಲೇ ಸಿಎಂ ಸಿದ್ದರಾಮಯ್ಯ ಅವರಿಗೆ ಬೆಂಬಲ ನೀಡಿದ್ದೇನೆ. ಯಾವುದೋ ಸಂದರ್ಭದಲ್ಲಿ ಹೇಳಿಕೆ ಕೊಟ್ಟಿರುತ್ತಾರೆ. ಎಲ್ಲಿಯೂ ನಾನೇ ಸಿಎಂ ಆಗುತ್ತೇನೆ ಎಂದು  ಯಾರೂ ಹೇಳಿಲ್ಲ. ಈ ರೀತಿ ಹೇಳಿಕೆ ಎಪೇಕ್ಟ್ ಆಗುವುದಿಲ್ಲ ಎಂದರು.

2028ಕ್ಕೆ ಸಿಎಂ ಆಗುವ ತಯಾರಿ ಇದೆ ನಮ್ಮದು. ಅಲ್ಲಿಯವರೆಗೆ ಅಭಿಮಾನಿಗಳು ಕಾಯಬೇಕು ಎಂದ ಸತೀಶ್ ಜಾರಕಿಹೊಳಿ‌ ಮನವಿ ಮಾಡಿದರು.

Related Articles

Back to top button