Latest

ಮುಂಬೈ ಮೂಲದ ಗ್ಯಾಂಗ್ ಸ್ಟರ್ ಬಂಧನ

ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ಮುಂಬೈ ಮೂಲದ ಗ್ಯಾಂಗ್ ಸ್ಟರ್ ನನ್ನು ಬೆಂಗಳೂರಿನ ಅತ್ತಿಬೆಲೆ ಪೊಲೀಸರು ಬಂಧಿಸಿದ್ದಾರೆ.

ಗ್ಯಾಂಗ್ ಸ್ಟರ್ ಅಬ್ದುಲ್ ಅಜೀಜ್ ಖಾನ್ ಬಂಧಿತ ಆರೋಪಿ. ಮುಂಬೈ ಮೂಲದ ಕುಖ್ಯಾತ ಗ್ಯಾಂಗ್ ಸ್ಟರ್ ಆಗಿದ್ದ ಈತ ಕೊಲೆ‌, ದರೋಡೆ, ಬೆದರಿಕೆ, ಡ್ರಗ್ಸ್ ಪ್ರಕರಣಗಳು ಸೇರಿ ಒಟ್ಟು 37‌ ಪ್ರಕರಣಗಳಲ್ಲಿ ಭಾಗಿಯಾಗಿದ್ದ.

Home add -Advt

ಅತ್ತಿಬೆಲೆಯ ರೆಸ್ಟೋರೆಂಟ್​ನಲ್ಲಿ ಅಡಗಿದ್ದ ವೇಳೆ ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿದ ಪೊಲೀಸರು, ಬಂಧಿತನಿಂದ ಪಿಸ್ತೂಲ್, ನಾಲ್ಕು ಜೀವಂತ ಗುಂಡು ವಶಕ್ಕೆ ಪಡೆಯಲಾಗಿದೆ. 15 ಸಿ‌ಮ್‌ ಕಾರ್ಡ್​ಗಳು, 6 ಮೊಬೈಲ್ ಫೋನ್​ಗಳು​ ಜಪ್ತಿ ಮಾಡಲಾಗಿದೆ.
ಅಗ್ನಿಅವಘಡ; 8 ತಿಂಗಳ ಮಗು ಸೇರಿ ಐವರ ದುರ್ಮರಣ

Related Articles

Back to top button