Kannada NewsKarnataka NewsLatest

*ಕಳಪೆ ಕಾಮಗಾರಿ: ಓರ್ವ ಅಧಿಕಾರಿ ತಲೆದಂಡ: ಗುತ್ತಿಗೆದಾರರ ಕಂಪೆನಿ ಬ್ಲಾಕ್ ಲಿಸ್ಟ್ ಗೆ*

ಪ್ರಗತಿವಾಹಿನಿ ಸುದ್ದಿ: ವಾರ್ಡ್ ಸಂಖ್ಯೆ 110 ಸಂಪಂಗಿರಾಮನಗರ ವ್ಯಾಪ್ತಿಯಲ್ಲಿ ಇನ್‌ಫ್ರಾಸ್ಟಕ್ಟರ್‌ ಪ್ರೋಗ್ರಾಮ್ ಅಡಿಯಲ್ಲಿ ಆರ್ಟೀಲಿಯಲ್ ಮತ್ತು ಸಬ್ ಆರ್ಟೀಲಿಯಲ್ ರಸ್ತೆಗಳಲ್ಲಿ ಕೈಗೊಂಡಿರುವ ಆಸ್ಟಾಲಿಂಗ್ ಕಾಮಗಾರಿಗಳಲ್ಲಿ ಕಳಪೆ ನಿರ್ಮಾಣ ಮಾಡಿರುವುದು ಕಂಡುಬಂದಿದೆ. ಕಾಮಗಾರಿ ನಿರ್ವವಹಿಸಿರುವ ಸಂದರ್ಭದಲ್ಲಿ ಕ್ರಿಯಾಯೋಜನೆ ಅನುಸಾರ ಸರಿಯಾದ ಪ್ರಮಾಣದ ಹಾಗೂ ದಪ್ಪ ಆಸ್ಪಾಲ್ಡಿಂಗ್ ಮಾಡದೆ ಕಡಿಮೆ ಪ್ರಮಾಣದಲ್ಲಿ ಆಸ್ಪಾಲಿಂಗ್ ಮಾಡಿರುವುದು ಕಂಡುಬಂದಿರುತ್ತದೆ.

Home add -Advt

ಒಬ್ಬ ಜವಾಬ್ದಾರಿಯುತ ಅಧಿಕಾರಿಯಾಗಿ ಗುತ್ತಿಗೆದಾರರ ಜೊತೆ ಶಾಮೀಲಾಗಿ ಕರ್ತವ್ಯ ಲೋಪ ಎಸಗಿದ ಕಾರಣಕ್ಕೆ ಸಚಿವ ಕೃಷ್ಣ ಬೈರೇಗೌಡ ಅವರ ನಿರ್ದೇಶನದಂತೆ ವಾರ್ಡ್ ಸಂಖ್ಯೆ 110 ಸಂಪಂಗಿರಾಮನಗರ ರಲ್ಲಿ ಕಾರ್ಯನಿರ್ವಹಿಸುತ್ತಿರುವ ಸಹಾಯಕ ಅಭಿಯಂತರರಾದ ಪೂಜಾರಪ್ಪ ಅವರನ್ನು ಈ ತಕ್ಷಣದಿಂದ ಜಾರಿಗೆ ಬರುವಂತೆ ಇಲಾಖಾ ವಿಚಾರಣೆ ಕಾಯ್ದಿರಿಸಿ 1957ರ ಸಿಸಿಎ ನಿಯಮ 10 ರನ್ನಯ ಸೇವೆಯಿಂದ ಅಮಾನತ್ತುಪಡಿಸಿ ಆದೇಶಿಸಲಾಗಿದೆ.

ಅಲ್ಲದೇ ಕಳಪೆ ಕಾಮಗಾರಿ ಕಾರಣಕ್ಕೆ ಗುತ್ತಿಗೆದಾರರ ಕಂಪೆನಿಯನ್ನೂ ಬ್ಲಾಕ್ ಲಿಸ್ಟ್ ಗೆ ಸೇರಿಸಿ ಆದೇಶ ಹೊರಡಿಸಲಾಗಿದೆ.

Related Articles

Back to top button