Latest

ಉದ್ಯಮಿ ಕಟ್ಟೆ ಭೋಜಣ್ಣ ಆತ್ಮಹತ್ಯೆ ಪ್ರಕರಣ; ಗೋಲ್ಡ್ ಜ್ಯುವೆಲರ್ಸ್ ಮಾಲೀಕ ಅರೆಸ್ಟ್

ಪ್ರಗತಿವಾಹಿನಿ ಸುದ್ದಿ; ಉಡುಪಿ: ಉದ್ಯಮಿ ಕಟ್ಟೆ ಭೋಜಣ್ಣ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಗೋಲ್ಡ್ ಜ್ಯುವೆಲರ್ಸ್ ಮಾಲೀಕ ಗಣೇಶ್ ಶೆಟ್ಟಿ ಮೊಳಹಳ್ಳಿಯನ್ನು ಪೊಲೀಸರು ಬಂಧಿಸಿದ್ದಾರೆ.

ಕಟ್ಟೆ ಭೋಜಣ್ಣ ಎರಡು ದಿನಗಳ ಹಿಂದೆ ಗಣೇಶ್ ಶೆಟ್ಟಿ ನಿವಾಸದ ಸಿಟೌಟ್ ನಲ್ಲಿ ಕುಳಿತುಕೊಂಡು ರಿವಾಲ್ವರ್ ನಿಂದ ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದರು. ಭೀಜಣ್ಣ ಬರೆದಿಟ್ಟ ಡೆತ್ ನೋಟ್ ಕೂಡ ಲಭ್ಯವಾಗಿದ್ದು, ಗಣೇಶ್ ಶೆಟ್ಟಿ ವಂಚನೆ ಮಾಡಿದ್ದಾರೆ ಎಂದು ಆರೋಪಿಸಿದ್ದರು.

Home add -Advt

ಅಲ್ಲದೇ ತಮ್ಮ ತಂದೆ ಸಾವಿಗೆ ಗಣೇಶ್ ಶೆಟ್ಟಿ ಹಾಗೂ ಇಸ್ಮಾಯಿಲ್ ಎಂಬುವವರ ಪ್ರಚೋದನೆ ಕಾರಣ ಎಂದು ಕಟ್ಟೆ ಭೋಜಣ್ಣ ಪುತ್ರ ಸುಧೀಂದ್ರ ದೂರು ದಾಖಲಿಸಿದ್ದರು. ಈ ಹಿನ್ನೆಲೆಯಲ್ಲಿ ಐಪಿಸಿ ಸೆಕ್ಷನ್ 306 ಅಡಿಯಲ್ಲಿ ಗಣೇಶ್ ಶೆಟ್ಟಿ ಬಂಧಿಸಿರುವ ಪೊಲೀಸರು ನ್ಯಾಯಾಲಯಕ್ಕೆ ಹಾಜರು ಪಡಿಸಿದ್ದಾರೆ. ಮೇ 30ರ ವರೆಗೆ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.

ಮತ್ತೋರ್ವ ಆರೋಪಿ ಇಸ್ಮಾಯಿಲ್ ಗಾಗಿ ಶೋಧ ನಡೆಸಲಾಗಿದೆ.
ಉನ್ನತ ಶಿಕ್ಷಣ ಸಚಿವ ಡಾ.ಅಶ್ವತ್ಥನಾರಾಯಣ ವಿರುದ್ಧ FIR ದಾಖಲು

Related Articles

Back to top button