Belagavi NewsBelgaum NewsKannada NewsKarnataka News

*ಯಂಗ್ ಮಾಸ್ಟರ್ಸ್ ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತ ಕಾರ್ಯಕ್ರಮ*

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ : ಸ್ವರ ಮಲ್ಹಾರ ಫೌಂಡೇಶನ್ ವತಿಯಿಂದ ಫೆಬ್ರವರಿ 16, ಭಾನುವಾರ ಬೆಳಗಾವಿಯಲ್ಲಿ ಯುವ ಕಲಾವಿದರಿಂದ ಯಂಗ್ ಮಾಸ್ಟರ್ಸ್  ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ.

ಅಂದು ಬೆಳಗ್ಗೆ 9 ಗಂಟೆಯಿಂದ ಬುಧವಾರ ಪೇಟೆಯ ಪಂಡಿತ್ ರಾಮಭಾವು ಬಿಜಾಪುರೆ ಸ್ವರ ಮಂದಿರದಲ್ಲಿ ಕಾರ್ಯಕ್ರಮ ನಡೆಯಲಿದೆ. ಬೆಂಗಳೂರಿನ ದರ್ಶನ್ ಮೆಳವಂಕಿ, ಕೀರ್ತನ ಹೊಳ್ಳ, ಪುಣೆಯ ಶಾಶ್ವತಿ ಚವ್ಹಾಣ, ಕಾರವಾರದ ಸಂಕೇತ್ ಸಪ್ರೆ ಕಾರ್ಯಕ್ರಮ ನಡೆಸಿಕೊಡಲಿದ್ದಾರೆ. 

Home add -Advt

ನಾರಾಯಣ ಗಣಾಚಾರಿ ಮತ್ತು ಅಂಗದ ದೇಸಾಯಿ ಇವರು ತಬಲಾ ಹಾಗೂ ಸಾರಂಗ್ ಕುಲ್ಕರ್ಣಿ, ತ್ರಿಗುಣ ಪೂಜಾರಿ ಇವರು  ಹಾರ್ಮೋನಿಯಂ ಸಾಥ್ ನೀಡಲಿದ್ದಾರೆ.

ಬೆಳಿಗ್ಗೆ 9 ರಿಂದ 1 ಗಂಟೆ ಹಾಗೂ ಮಧ್ಯಾಹ್ನ 4 ರಿಂದ 8 ಗಂಟೆಯವರೆಗೆ ಕಾರ್ಯಕ್ರಮ ನಡೆಯುವುದು. ಕಾರ್ಯಕ್ರಮಕ್ಕೆ ಉಚಿತ ಪ್ರವೇಶವಿದ್ದು, ಸಂಗೀತಾಸಕ್ತರು, ಆಗಮಿಸಲು ಕೋರಲಾಗಿದೆ.

Related Articles

Back to top button