ಸಂಸದರಿಗೆ ಬೊಮ್ಮಾಯಿ ಪತ್ರ

ಪ್ರಗತಿವಾಹಿನಿ ಸುದ್ದಿ, ಬೆಂಗಳೂರು – ರಾಜ್ಯದ ವಿವಿಧ ಯೋಜನೆಗಳ ಸಂಬಂಧ ಕೇಂದ್ರದ ಗಮನ ಸೆಳೆಯುವ ಕುರಿತು ಮತ್ತು ಮುಂಬರುವ ಬಜೆಟ್ ಸಂಬಂಧಿಸಿದಂತೆ ಚರ್ಚಿಸಲು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸೋಮವಾರ ನವದೆಹಲಿಯಲ್ಲಿ ರಾಜ್ಯದ ಸಂಸದರ ಸಭೆ ಕರೆದಿದ್ದಾರೆ.

ಸಭೆಗೆ ಹಾಜರಿರುವಂತೆ ಬೊಮ್ಮಾಯಿ ಎಲ್ಲ ಸಂಸದರಿಗೆ ಪತ್ರ ಬರೆದಿದ್ದಾರೆ. ರಾಜ್ಯವನ್ನು ಪ್ರತಿನಿಧಿಸುವ ಕೇಂದ್ರದ ಸಚಿವರೂ ಸಹ ಹಾಜರಿರುವಂತೆ ಕೋರಿದ್ದಾರೆ. ನವದೆಹಲಿಯ ಖಾಸಗಿ ಹೊಟೆಲ್ ಒಂದರಲ್ಲಿ ಸಭೆ ನಡೆಯಲಿದೆ.

ಸೋಮವಾರ ಮತ್ತು ಮಂಗಳವಾರ ಸಿಎಂ ದೆಹಲಿ ಪ್ರವಾಸ ಕೈಗೊಂಡಿದ್ದಾರೆ. ಈ ವೇಳೆ ರಾಜ್ಯದ ಸಚಿವಸಂಪುಟ ವಿಸ್ತರಣೆ ವಿಷಯವನ್ನೂ ವರಿಷ್ಠರೊಂದಿಗೆ ಚರ್ಚಿಸುವ ಸಾಧ್ಯತೆ ಇದೆ. ಮಂತ್ರಿಮಂಡಳ ಸೇರಲು ಈಗಾಗಲೆ ಸಾಕಷ್ಟು ಜನರು ಲಾಬಿ ನಡೆಸಿದ್ದಾರೆ.

ದೆಹಲಿಯಿಂದ ವಾಪಸ್ಸಾದ ಮರುದಿನ, ಫೆಬ್ರವರಿ 9 ರಂದು ಬೊಮ್ಮಾಯಿ ಸಚಿವಸಂಪುಟ ಸಭೆ ಕರೆದಿದ್ದಾರೆ.

Related Articles

Back to top button