Kannada NewsKarnataka NewsNational

*1.5 ಲಕ್ಷ ಲಂಚ ಸ್ವೀಕರಿಸುವಾಗ ಬಲೆಗೆ ಬಿದ್ದ ತಹಶೀಲ್ದಾರ್; ಬಂಧನ*

ಪ್ರಗತಿವಾಹಿನಿ ಸುದ್ದಿ: ದೊಡ್ಡಬಳ್ಳಾಪುರ ಉಪವಿಭಾಗಾಧಿಕಾರಿ ಕಚೇರಿಯ ಗ್ರೇಡ್ 2 ತಹಶೀಲ್ದಾರ್ ದಿವಾಕ‌ರ್ ಒಂದೂವರೆ ಲಕ್ಷ ರೂ. ಲಂಚ ಪಡೆಯುವ ವೇಳೆ ಲೋಕಾಯುಕ್ತ ಆಧಿಕಾರಿಗಳಿಗೆ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದಿದ್ದಾರೆ.

ನೆಲಮಂಗಲ ತಾಲೂಕಿನ ಗಿರಿಯನಪಾಳ್ಯದ ಸರ್ವೇ 1/1A1 ರೀ ಪೋಡಿ 1/4, 1/7. 8.20 ಗುಂಟೆ ಕೋರ್ಟ್ ಸೇಲ್ ಡೀಡ್ ಪ್ರಕಾರ ಖಾತೆ ಮಾಡಿಬೇಕಾಗಿತ್ತು. ಇದನ್ನು ಮಾಡಿಕೊಡಲು ದೊಡ್ಡಬಳ್ಳಾಪುರ ಉಪವಿಭಾಗಾಧಿಕಾರಿ ಕಚೇರಿಯ ಗ್ರೇಡ್ 2 ತಹಶೀಲ್ದಾರ್ ದಿವಾಕರ್ ಅವರು ದೂರುದಾರ ನೆಲಮಂಗಲ ತಾಲೂಕಿನ ಅಪ್ಪಗೊಂಡನಹಳ್ಳಿಯ ವಕೀಲರಾದ ದೊರೆಸ್ವಾಮಿ.ಎಲ್ ಅವರ ಬಳಿ ಸುಮಾರು 2ಲಕ್ಷ ಬೇಡಿಕೆ ಇಟ್ಟಿದ್ದರು.

Home add -Advt

ಒಂದೂವರೆ ಲಕ್ಷ ಕೊಡುವಂತೆ ಮಾತುಕತೆ ಆಗಿತ್ತು, ಅದರ ಪ್ರಕಾರ ಇಂದು ದೇವನಹಳ್ಳಿ ಬಳಿ ಮಾತುಕತೆ ಪ್ರಕಾರ ಒಂದೂವರೆ ಲಕ್ಷ ನೀಡುವಾಗ ಲೋಕಾಯುಕ್ತಕ್ಕೆ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದಿದ್ದಾರೆ.

ಲೋಕಾಯುಕ್ತ ಪೊಲೀಸ್ ಇನ್ಸ್ ಪೆಕ್ಟರ್ ರಮೇಶ್ ಮತ್ತು ತಂಡ ದಾಳಿ ನಡೆಸಿ ಈ ಅಧಿಕಾರಿಯನ್ನು ಬಂಧಿಸಿದ್ದಾರೆ. ಸದ್ಯ ದೊಡ್ಡಬಳ್ಳಾಪುರ ಉಪವಿಭಾಗಾಧಿಕಾರಿ ಕಚೇರಿಯಲ್ಲಿ ದಾಖಲೆಗಳ ಪರಿಶೀಲನೆ ಮುಂದುವರಿದಿದ್ದು ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗಿದೆ.

Related Articles

Back to top button