ಪ್ರಗತಿವಾಹಿನಿ ಸುದ್ದಿ, ಬೆಳಗಾವಿ:
ಇಲ್ಲಿಯ ಟಿಳಕವಾಡಿ ಸರಕಾರಿ ಶಾಲೆಗೆ ಭೇಟಿ ನೀಡಿದ ಶಾಸಕ ಅಭಯ ಪಾಟೀಲ ಮಕ್ಕಳೊಂದಿಗೆ ಬಿಯೂಟ ಸೇವಿಸಿದರು.

ಬಿಸಿಯೂಟದ ಗುಣಮಟ್ಟ ಕಾಯ್ದುಕೊಳ್ಳುವಂತೆ ಸೂಚಿಸಿದ ಶಾಸಕರು, ಶಿಕ್ಷಕರು ದಿನವೂ ಊಟದ ರುಚಿ ನೋಡಿ ಗುಣಮಟ್ಟ ಸುಧಾರಣೆಗೆ ಸಲಹೆ ನೀಡಬೇಕೆಂದರು.
ಗುಣಮಟ್ಟ ಸರಿ ಇಲ್ಲದಿದ್ದರೆ ಊಟ ಸರಬರಾಜು ಸಂಸ್ಥೆಯನ್ನು ಬದಲಾಯಿಸುವುದಾಗಿ ಅವರು ಎಚ್ಚರಿಸಿದರು.


