Kannada NewsKarnataka NewsLatest

ಬಿ.ಆರ್. ಸಂಗಪ್ಪಗೋಳ ವಿಧಿವಶ

ಪ್ರಗತಿವಾಹಿನಿ ಸುದ್ದಿ, ಚಿಕ್ಕೋಡಿ – ಚಿಕ್ಕೋಡಿ ಜಿಲ್ಲಾ ಹೋರಾಟದ ಮುಂಚೂಣಿಯಲ್ಲಿದ್ದ, ನಿರಂತರ ಹೋರಾಟಗಾರ ಬಿ.ಆರ್.ಸಂಗಪ್ಪಗೋಳ ವಿಧಿವಶರಾಗಿದ್ದಾರೆ.

ಅನಾರೋಗ್ಯದಿಂದಾಗಿ ಆಸ್ಪತ್ರೆಗೆ ದಾಖಲಾಗಿದ್ದ ಅವರು ಶುಕ್ರವಾರ ಸಂಜೆ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದರು. ಅವರಿಗೆ 77 ವರ್ಷ ವಯಸ್ಸಾಗಿತ್ತು.

Home add -Advt

1987ರಲ್ಲಿ ಜಿಲ್ಲಾ ಪಂಚಾಯಿತಿ ಸದಸ್ಯರಾಗಿ, ರಸ್ತೆ ಸಾರಿಗೆ ಸಂಸ್ಥೆ ನಿರ್ದೇಶಕರಾಗಿ ಸೇವೆ ಸಲ್ಲಿಸಿದ್ದ ಸಂಗಪ್ಪಗೋಳ, ಚಿಕ್ಕೋಡಿ ತಾಲೂಕು ಮಜಲಟ್ಟಿ ಗ್ರಾಮದಲ್ಲಿ ಜನಿಸಿದ್ದರು.  ಸರ್ಕಾರಿ ಶಾಲೆಗಳನ್ನು ಸಬಲೀಕರಣಗೊಳಿಸಿ, ಕಾಯಕಯೋಗಿಯಾಗಿ , ನಿರಂತರ ಸಮಾಜಸೇವೆ ಮಾಡುತ್ತಾ ಆ ಗ್ರಾಮವನ್ನು ಶಿಕ್ಷಣ ಕಾಶಿಯನ್ನಾಗಿ ಮಾಡುವಲ್ಲಿ ಹಗಲಿರುಳು ಎನ್ನದೇ ದಣಿಯದೆ ದುಡಿದು ಲಕ್ಷಾಂತರ ಬಡ ವಿದ್ಯಾರ್ಥಿಗಳ ಬಾಳಿನಲ್ಲಿ ವಿದ್ಯೆಯ ಕಿಡಿ ಹಚ್ಚಿದ್ದರು.

ಅವರಿಗೆ ಪತ್ನಿ,  4 ಗಂಡು, 2 ಹೆಣ್ಣು ಮಕ್ಕಳಿದ್ದಾರೆ.

 

  2 ದಿನ ಏನೇನು ಲಾಕ್? ಇಲ್ಲಿದೆ ಮಾಹಿತಿ

 

Related Articles

Back to top button