ಪ್ರಗತಿವಾಹಿನಿ ಸುದ್ದಿ, ಬೆಳಗಾವಿ – ಬೆಳಗಾವಿ ನಗರಾಭಿವೃದ್ದಿ ಪ್ರಾಧಿಕಾರದ ಕಣಬರ್ಗಿ ವಸತಿ ಯೋಜನೆಗೆ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಹೆಸರು ನಾಮಕರಣ ಮಾಡಲು ಸರಕಾರ ಅನುಮೋದನೆ ನೀಡಿದೆ.
ಈ ಕುರಿತು ಅಭಿವೃದ್ಧಿ ಪ್ರಾಧಿಕಾರ ಮತ್ತು ನಗರ ಯೋಜನೆ ಸೇವೆಯ ಅಧೀನ ಕಾರ್ಯದರ್ಶಿ ಲತಾ ಕೆ ಅವರು ಸುತ್ತೋಲೆ ಹೊರಡಿಸಿದ್ದಾರೆ. ನಗರಾಭಿವೃದ್ಧಿ ಪ್ರಾಧಿಕಾರದ 2020ರ ನವೆಂಬರ್ 27ರ ಸಭೆಯ ನಡವಳಿಕೆಯಂತೆ ಈ ಕುರಿತು ಒಪ್ಪಿಗೆ ನೀಡಲಾಗಿದೆ.
ಹಾಗೆಯೇ, ಕಣಬರ್ಗಿಯ ಕಟ್ಟಡ ಸಮುಚ್ಛಯಕ್ಕೆ ಕೇಂದ್ರದ ಮಾಜಿ ಸಚಿವ ದಿ. ಸುರೇಶ್ ಅಂಗಡಿ ಹೆಸರು ಹಾಗೂ ರಾಮತೀರ್ಥ ನಗರದಲ್ಲಿ ನಿರ್ಮಿಸಲಾಗುತ್ತಿರುವ ಮಹತ್ವಾಕಾಂಕ್ಷೆಯ ಹಾಕಿ ಮೈದಾನಕ್ಕೆ
ಬೆಳಗಾವಿಗೆ ಕೀರ್ತಿ ತಂದುಕೊಟ್ಟ ಒಲಿಂಪಿಕ್ ಹಾಕಿ ಪಟು ಬಂಡು ಪಾಟೀಲ ಅವರ ಹೆಸರು ನಾಮಕರಣ ಮಾಡಲು ಸಹ ಸರಕಾರ ಒಪ್ಪಿಗೆ ಸೂಚಿಸಿದೆ.
ಸಿಎಂ ಯಡಿಯೂರಪ್ಪ ನಾಳೆ ಎಲ್ಲೆಲ್ಲಿ ಭೇಟಿ ನೀಡಲಿದ್ದಾರೆ? ಇಲ್ಲಿದೆ ಸಮಗ್ರ ವಿವರ; ಜಿಲ್ಲೆಯಲ್ಲಿ 19,035 ಜನರ ರಕ್ಷಣೆ
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ