Politics

*ಸೈಟ್ ವಾಪಸ್ ರಾಜಕೀಯ ಡ್ರಾಮಾ: ಬಿ.ವೈ.ವಿಜಯೇಂದ್ರ ವಾಗ್ದಾಳಿ*

ಪ್ರಗತಿವಾಹಿನಿ ಸುದ್ದಿ: ಮಹತ್ತರವಾದ ಬೆಳವಣಿಗೆಯೊಂದರಲ್ಲಿ ಸಿಎಂ ಸಿದ್ದರಾಮಯ್ಯ ಮುಡಾ ಸೈಟ್ ವಾಪಸ್ ನೀಡಿರುವುದು ರಾಜಕೀಯ ಡ್ರಾಮಾ. ಇನ್ನಾದರೂ ಭಂಡತನವನ್ನು ಬಿಟ್ಟು ರಾಜೀನಾಮೆ ನೀಡಲಿ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ವಾಗ್ದಾಳಿ ನಡೆಸಿದ್ದಾರೆ

ಬೆಂಗಳೂರಿನಲ್ಲಿ ಸುದ್ದಿಗೋಷ್ಠಿ ನಡೆಸಿದ ಬಿ.ವೈ.ವಿಜಯೇಂದ್ರ, ಸಿಎಂ ಸಿದ್ದರಾಮಯ್ಯ ಅವರ ಪತ್ನಿ ಪಾರ್ವತಿ ಅವರು 14 ನಿವೇಶನಗಳನ್ನು ವಾಪಸ್ ಕೊಡುವುದಾಗಿ ನಿನ್ನೆ ರಾತ್ರಿ ಪತ್ರ ಬರೆದಿದ್ದಾರೆ. ಸಿಎಂ ಪತ್ನಿ ಸಿಎಂ ಹಾಗೂ ಪುತ್ರನಿಗೂ ತಿಳಿಸದೇ ಸಿಎಂ ಸಿದ್ದರಾಮಯ್ಯ ಅವರ ಅಧಿಕೃತ ನಿವಾಸದಿಂದಲೇ ಪತ್ರ ಬರೆದು ಸೈಟ್ ವಾಪಾಸ್ ಕೊಡುವುದಾಗಿ ಹೇಳಿದ್ದಾರೆ. ಪತ್ನಿ ನಿರ್ಧಾರ ನನಗೂ ಅಚ್ಚರಿಯಾಗಿದೆ ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ. ಸೈಟ್ ವಾಪಸ್ ರಾಜಕೀಯ ಡ್ರಾಮಾ. ಕಾನೂನಿನ ಕುಣಿಕೆಯಿಂದ ತಪ್ಪಿಸಿಕೊಳ್ಳಲು, ಅನುಕಂಪ ಗಿಟ್ಟಿಸಿಕೊಳ್ಳಲು ಮಾಡುತ್ತಿರುವುದು ಎಂಬುದು ಸ್ಪಷ್ಟ ಎಂದು ಕಿಡಿಕಾರಿದರು.

ಸಿಎಂ ಪತ್ನಿ ಸ್ವ ಇಚ್ಛೆಯಿಂದ ಸೈಟ್ ವಾಪಾಸ್ ಕೊಡಲು ಒಪ್ಪಿದರೀ ಅಥವಾ ಬಲವಂತದಿಂದ ಒಪ್ಪಿದರೋ ಎಂಬುದು ಗೊತ್ತಿಲ್ಲ. ನಾನು ಜಗ್ಗಲ್ಲ, ಬಗ್ಗಲ್ಲ ಅಂತಾ ಸಿದ್ದರಾಮಯ್ಯ ಆರ್ಭಟ ಮಾಡುತ್ತಿದ್ದರು. ನಾನ್ಯಾಕೆ ಸೈಟ್ ವಾಪಸ್ ಕೊಡಬೇಕು? ನನಗೆ 62 ಕೋಟಿ ಕೊಡ್ತಾರಾ? ಎಂತಾ ಕೇಳಿದ್ದರು. ಈಗ ಕೋರ್ಟ್ ತನಿಖೆಗೆ ಆದೇಶ ನೀಡುತ್ತಿದ್ದಂತೆ ಇದ್ದಕ್ಕಿದ್ದಂತೆ ನಿರ್ಧಾರ ಬದಲಿಸಿ ನಿಏಶನ ವಾಪಸ್ ಕೊಟ್ಟಿದ್ದಾರೆ ಎಂದರೆ ಇದು ಡ್ರಾಮಾ ಎಂದು ಹೇಳಿದರು.

Home add -Advt

Related Articles

Back to top button