Cancer Hospital 2
Laxmi Tai Society2
Beereshwara add32

*ತಂದೆಯನ್ನೇ ಸುಪಾರಿ ಕೊಟ್ಟು ಹತ್ಯೆಗೈದ ಮಗ*

Anvekar 3

ಪ್ರಗತಿವಾಹಿನಿ ಸುದ್ದಿ: ಮಗ ಹಾಗೂ ಸೊಸೆಯೇ ತಂದೆಯನ್ನು ಕೊಲ್ಲಲು ಸುಪಾರಿ ಕೊಟ್ಟು ಹತ್ಯೆ ಮಾಡಿರುವ ಘಟನೆ ಬಾಗಲಕೋಟೆ ಜಿಲ್ಲೆಯ ತಿಮ್ಮಾಪುರ ಗ್ರಾಮದಲ್ಲಿ ನಡೆದಿದೆ.

ಚೆನ್ನಪ್ಪ (66) ಮಗನಿಂದಲೆ ಕೊಲೆಯಾಗಿರುವ ವ್ಯಕ್ತಿ. 37 ಎಕರೆ ಜಮೀನು ಭಾಗದ ವಿಚಾರವಾಗಿ ತಂದೆ ಚೆನ್ನಪ್ಪ ಹಾಗೂ ಮಗ ಚೆನ್ನಬಸಪ್ಪ ನಡುವೆ ಆಗಾಗ ಜಗಳವಾಗುತ್ತಿತ್ತು. ಇದೇ ವಿಚಾರ ತಾರಕಕ್ಕೇರಿದೆ.

ಮಗ ಚೆನ್ನಬಸಪ್ಪ ಹಾಗೂ ಸೊಸೆ ಶಿವಬಸವ್ವ ಇಬ್ಬರೂ ಮಹಾಂತೇಶ್ ಮರಡಿಮಠ ಎಂಬಾತನಿಗೆ 3 ಲಕ್ಷ ರೂಪಾಯಿ ಸುಪಾರಿ ಕೊಟ್ಟು ತಂದೆ ಹತ್ಯೆ ಮಾಡಲು ಹೇಳಿದ್ದಾರೆ. ಅದರಂತೆ ಸುಪಾರಿ ಪಡೆದ ಆತ ನಿನ್ನೆ ರಾತ್ರಿ ರಾಂಪುರ ಗ್ರಾಮದ ಬಳಿ ಚೆನ್ನಪ್ಪನನ್ನು ಬರ್ಬರವಾಗಿ ಕೊಲೆಗೈದಿದ್ದಾನೆ.

Emergency Service

ವಿಷಯ ತಿಳಿದು ಸ್ಥಳಕ್ಕೆ ಧಾವಿಸಿದ ಪೊಲೀಸರು ತನಿಖೆ ನಡೆಸಿದ್ದು, ಮಗ-ಸೊಸೆಯೇ ಆರೋಪಿಗಳು ಎಂದು ತಿಳಿದುಬಂದಿದೆ.

ಪ್ರಕರಣ ಸಂಬಂಧ ಮಗ ಚೆನ್ನಬಸಪ್ಪ, ಸೊಸೆ ಶಿವಬಸವ್ವ, ಮಹಾಂತೇಶ್ ಹಾಗೂ ಚೆನ್ನಪ್ಪ ಆಪ್ತ ರಮೇಶ್ ಸೇರಿ ನಾಲ್ವರು ಆರೋಪಿಗಳನ್ನು ಬಂಧಿಸಿದ್ದಾರೆ.

Gokak Jyotishi add 8-2
Bottom Add3
Bottom Ad 2

You cannot copy content of this page