Kannada NewsKarnataka NewsLatest
*ಮಳೆ ನೀರಿನ ತಗ್ಗುಗುಂಡಿಗೆ ಬಿದ್ದು ಇಬ್ಬರು ಬಾಲಕರು ದುರ್ಮರಣ*

ಪ್ರಗತಿವಾಹಿನಿ ಸುದ್ದಿ; ಕಲಬುರ್ಗಿ: ಕಲಬುರ್ಗಿ ಜಿಲ್ಲೆಯಾದ್ಯಂತ ಬಿರುಗಾಳಿ ಸಹಿತ ಧಾರಾಕಾರ ಮಳೆಯಿಂದಾಗಿ ಹಲವು ಪ್ರದೇಶಗಳು ಜಲಾವೃತಗೊಂಡಿದೆ. ಈ ನಡುವೆ ಕಲಬುರ್ಗಿ ನಗರದಲ್ಲಿ ದುರಂತವೊಂದು ಸಂಭವಿಸಿದೆ.
ನಗರದ ದುಬೈ ಕಾಲೋನಿಯಲ್ಲಿ ಮಳೆನೀರು ತುಂಬಿದ್ದ ತಗ್ಗುಗುಂಡಿಗೆ ಬಿದ್ದು ಇಬ್ಬರು ಬಾಲಕರು ಸಾವನ್ನಪ್ಪಿದ್ದಾರೆ. ಓವರ್ ಹೆಡ್ ನೀರಿನ ಟ್ಯಾಂಕ್ ನಿರ್ಮಾಣಕ್ಕಾಗಿ ಈ ತಗ್ಗುಗುಂಡಿ ತೆಗೆಯಲಾಗಿತ್ತು.
ಇಬ್ಬರು ಬಾಲಕರು ತಗ್ಗುಗುಂಡಿಗೆ ಬಿದ್ದು ಸಾವನ್ನಪ್ಪಿದ್ದಾರೆ. 11 ವರ್ಷದ ಅಭಿ ಹಾಗೂ 12 ವರ್ಷದ ಅಜಯ್ ಮೃತ ಬಾಲಕರು. ಮಳೆ ನೀರಿನಿಂದ ತಗ್ಗುಗುಂಡಿ ಸಂಪೂರ್ಣ ಜಲಾವೃತವಾಗಿತ್ತು. ಬಾಲಕರಿಬ್ಬರೂ ಆಕಸ್ಮಿಕವಾಗಿ ತಗ್ಗುಗುಡಿಗೆ ಬಿದ್ದಿದ್ದಾರೆ.
ಚೌಕ್ ಠಾಣೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಓರ್ವ ಬಾಲಕನ ಮೃತದೇಹವನ್ನು ಹೊರತೆಗೆದಿದ್ದಾರೆ. ಇನ್ನೋರ್ವ ಬಾಲಕನ ಮೃತದೇಹಕ್ಕಾಗಿ ಶೋಧ ಮುಂದುವರೆದಿದೆ.




