Kannada NewsKarnataka News

*ತಾನು ಕೆಲಸ ಮಾಡುತ್ತಿದ್ದ ಬ್ಯಾಂಕ್ ನಲ್ಲೇ ಆತ್ಮಹತ್ಯೆಗೆ ಶರಣಾದ ನಿವೃತ್ತ ನೌಕರ*

ಪ್ರಗತಿವಾಹಿನಿ ಸುದ್ದಿ: ನಿವೃತ್ತ ಬ್ಯಾಂಕ್ ನೌಕರರೊಬ್ಬರು ತಾನು ಕೆಲಸ ಮಾಡುತ್ತಿದ್ದ ಬ್ಯಾಂಕ್ ನಲ್ಲಿಯೇ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಮಂಗಳೂರಿನ ಕೊಡಿಯಾಲಬೈಲಿನಲ್ಲಿ ನಡೆದಿದೆ.

ಅಳಕೆ ನಿವಾಸಿ ಗಿರಿಧರ ಯಾದವ್ (61) ಆತ್ಮಹತ್ಯೆ ಮಾಡಿಕೊಂಡವರು. ಆತ್ಮಹತ್ಯೆಗೆ ನಿಖರ ಕಾರಣ ತಿಳಿದುಬಂದಿಲ್ಲ. ಬಂದರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಗಿರಿಧರ್ ಯಾದವ್ ಕೊಡಿಯಾಲಬೈಲ್ ನ ಬ್ಯಾಂಕ್ ನಲ್ಲಿ ಅಟೆಂಡರ್ ಆಗಿ ಕೆಲಸ ಮಾಡುತ್ತಿದ್ದರು. ಕೆಲ ದಿನಗಳ ಹಿಂದಷ್ಟೆ ನಿವೃತ್ತಿಯಾಗಿದ್ದರು. ನಿವೃತ್ತಿ ಬಳಿಕವೂ ಬ್ಯಾಂಕ್ ಗೆ ಬಂದು ಹೋಗುತ್ತಿದ್ದರು. ಬುಧವಾರ ಬ್ಯಾಂಕ್ ಗೆ ಹೋಗಿ ಬರುತ್ತೇನೆ ಎಂದು ಮನೆಯಿಂದ ಹೋದವರು ವಾಪಸ್ ಆಗಿಲ್ಲ. ಇದರಿಂದ ಗಾಬರಿಯಾದ ಪತ್ನಿ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದರು.

ಬ್ಯಾಂಕ್ ಸಿಬ್ಬಂದಿ ಇಂದು ಬೆಳಿಗ್ಗೆ ಬ್ಯಾಂಕ್ ನ ಸ್ಟೋರ್ ರೂಂ ಬಾಗಿಲು ತೆಗೆದು ನೋಡಿದಾಗ ಗಿರಿಧರ ಯಾದವ್ ಶವ ನೇಣುಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದೆ.

ಬುಧವಾರ ಬ್ಯಾಂಕ್ ಗೆ ಬಂದಿದ್ದ ಗಿರಿಧರ್, ಸ್ಟೋರ್ ರೂಂ ನಲ್ಲಿಯೇ ನೇಣಿಗೆ ಕೊರಳೊಡ್ಡಿರುವ ಶಂಕೆ ವ್ಯಕ್ತವಗಿದೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ನಡೆಸಿದ್ದಾರೆ.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button