ಪ್ರಗತಿವಾಹಿನಿ ಸುದ್ದಿ; ಮೈಸೂರು: ಸಿಎಂ ಬಿ.ಎಸ್.ಯಡಿಯೂರಪ್ಪ ಹಾಗೂ ಬಿ.ವೈ.ವಿಜಯೇಂದ್ರ ವಿರುದ್ಧ ಮತ್ತೆ ವಾಗ್ದಾಳಿ ನಡೆಸಿರುವ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್, ಸಿಎಂ ನಿವಾಸ ಕಾವೇರಿ ಹಿಂಭಾಗದ ಗೆಸ್ಟ್ ಹೌಸ್ ಮೇಲೆ ಯಾಕೆ ಸಿಸಿಬಿ ಪೊಲೀಸರು ದಾಳಿ ನಡೆಸುತ್ತಿಲ್ಲ ಎಂದು ಪ್ರಶ್ನಿಸಿದ್ದಾರೆ.
ಮೈಸೂರಿನಲ್ಲಿ ಮಾತನಾಡಿದ ಶಾಸಕರು, ಸಿಸಿಬಿ ಪೊಲೀಸರು ಮೊದಲು ಅಲ್ಲಿ ದಾಳಿ ನಡೆಸಬೇಕು ಎಲ್ಲಾ ಡೀಲ್ ಗಳು ನಡೆಯುವುದೇ ಅಲ್ಲಿ. ವಿಜಯೇಂದ್ರ ಡೀಲ್ ಮಾಡುವುದೇ ಆ ಸ್ಥಳದಲ್ಲಿ ಸರ್ಕಾರ ಭ್ರಷ್ಟಾಚಾರದಲ್ಲಿ ಮುಳುಗಿದೆ. ದಿನಕ್ಕೆ ನೂರು ಕೋಟಿ ರೂಪಾಯಿ ಲೂಟಿ ಹೊಡೆಯುತ್ತಿದ್ದಾರೆ ಎಂದು ಕಿಡಿಕಾರಿದರು.
ಸಿಎಂ ಬದಲಾವಣೆಗೆ ಆ.15ರವರೆಗೆ ಯಾಕೆ ಕಾಯಬೇಕು? ಶೀಘ್ರದಲ್ಲೇ ಸಿಎಂ ಬದಲಾವಣೆ ಮಾಡಬೇಕು. ಕಾಂಗ್ರೆಸ್ ನಾಯಕರು ಕೂಡ ಸರ್ಕಾರದ ಭ್ರಷ್ಟಾಚಾರದಲ್ಲಿ ಭಾಗಿಯಾಗಿದ್ದಾರೆ. ರಾಜ್ಯದಲ್ಲಿ ವಿಪಕ್ಷಗಳು ಸತ್ತು ಹೋಗಿವೆ. ಬಿಎಸ್ ವೈ ಜೊತೆ ಎಲ್ಲರೂ ಶಾಮೀಲಾಗಿದ್ದಾರೆ. ಹಾಗಾಗಿ ಯಡಿಯೂರಪ್ಪ ವಿರುದ್ಧ ವಿಪಕ್ಷಗಳು ಮಾತನಾಡಲ್ಲ. ಚಾಮುಂಡಿದೇವರಲ್ಲಿ ದುಷ್ಟ ಸಂಹಾರಕ್ಕೆ ಪ್ರಾರ್ಥಿಸಿದ್ದೇನೆ. ಶೀಘ್ರದಲ್ಲಿ ಆಗುತ್ತೆ ಎಂದು ಹೇಳಿದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ