Belagavi NewsBelgaum NewsElection NewsKannada NewsKarnataka NewsPolitics

ಚಿಕ್ಕೋಡಿಯಲ್ಲಿ ಅಣ್ಣಾಸಾಹೇಬ ಜೊಲ್ಲೆ ಪರ ಬಸವಪ್ರಸಾದ ಹಾಗೂ ಪುರಸಭೆ ಸದಸ್ಯರಿಂದ ಮತಯಾಚನೆ

ಪ್ರಗತಿವಾಹಿನಿ ಸುದ್ದಿ, ಚಿಕ್ಕೋಡಿ: ಮಂಗಳವಾರ ಚಿಕ್ಕೋಡಿ ನಗರದಲ್ಲಿ ಲೋಕಸಭಾ ಚುನಾವಣೆಯ ಅಂಗವಾಗಿ ಚಿಕ್ಕೋಡಿ ನಗರದಲ್ಲಿ ಭಾರತೀಯ ಜನತಾ ಪಕ್ಷದ ಅಭ್ಯರ್ಥಿಯಾದ  ಅಣ್ಣಾಸಾಹೇಬ ಜೊಲ್ಲೆ ಅವರ ಪರವಾಗಿ ಚಿಕ್ಕೋಡಿ ಬಸ್ ನಿಲ್ದಾಣದಿಂದ, ಕೆ.ಸಿ. ರೋಡ್, ಪುರಸಭೆ ಮುಖಾಂತರ ಅಂಕಲಿ ಕೂಟ್ ಹಾಗೂ ಬಸವ ಸರ್ಕಲ್ ವರೆಗೆ ಪ್ರತಿ ಅಂಗಡಿಗೆ ಬಸವಜ್ಯೋತಿ ಯೂಥ್ ಫೌಂಡೇಶನ್ ಅಧ್ಯಕ್ಷ ಬಸವಪ್ರಸಾದ ಜೊಲ್ಲೆ ಭೇಟಿ ನೀಡಿ, ಮತಯಾಚನೆ ಮಾಡಿದರು.

ಈ ಸಂದರ್ಭದಲ್ಲಿ ಪುರಸಭೆ ಸದಸ್ಯರಾದ ಸಂಜಯ ಕವಟಗಿಮಠ, ಸಿದ್ದಪ್ಪ ಡಂಗೇರ, ಪ್ರವೀಣ ಕಾಂಬಳೆ, ನಾಗರಾಜ ಮೇದಾರ, ಸಂತೋಷ ಜುಗುಳೆ, ಪ್ರಶಾಂತ ಕಾಳಿಂಗೆ, ವಿನಾಯಕ ತಂಗಡಿ, ಕಿರಣ ಕದಂ, ಸೋಮು ಗವನಾಳೆ, ಸಂಜು ಅರಗೆ ಸ್ಥಳೀಯ ಮುಖಂಡರು, ಪಕ್ಷದ ಕಾರ್ಯಕರ್ತರು ಹಾಗೂ ನೂರಾರು ಯುವಕರು ಉಪಸ್ಥಿತರಿದ್ದರು.

Home add -Advt

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button