Kannada NewsLatest
ಮದುವೆ ಮನೆಗೆ ನುಗ್ಗಿ ಮನಸಾರೆ ಉಂಡ ಕರಡಿ!

ಪ್ರಗತಿವಾಹಿನಿ ಸುದ್ದಿ, ವಾಷಿಂಗ್ಟನ್: ಮದುವೆ ಮನೆಯೊಂದಕ್ಕೆ ನುಗ್ಗಿದ ಕರಡಿಯೊಂದು ಮನಸಾರೆ ಭೋಜನ ಭಕ್ಷಿಸಿ ದಿಗಿಲೆಬ್ಬಿಸದ ಘಟನೆಯೊಂದು ಅಮೆರಿಕದ ಕೊಲೊರಾಡೋದ ಬೌಲ್ಡರ್ ಕೌಂಟಿಯಲ್ಲಿ ನಡೆದಿದೆ.
ಬ್ರ್ಯಾಂಡನ್ ಮಾರ್ಟಿನೇಜ್ ಮತ್ತು ಕೈಲಿನ್ ಮ್ಯಾಕ್ರೊಸ್ಸಿ ಮಾರ್ಟಿನೇಜ್ ಅವರ ವಿವಾಹ ಸಮಾರಂಭ ನಡೆಯುತ್ತಿತ್ತು. ಎಲ್ಲ ಅತಿಥಿಗಳು ಆಗಮಿಸಿ ನವಜೋಡಿಗೆ ಶುಭ ಹಾರೈಸಿ ಭೋಜನ ಸವಿಯುತ್ತಿದ್ದರು. ಈ ವೇಳೆ ‘ಬಿನ್ ಬುಲಾಯೇ ಮೆಹೆಮಾನ್’ ಆಗಿ ಮದುವೆಮನೆಗೆ ನುಗ್ಗಿದ ಕರಡಿ ಅಲ್ಲಿರುವ ಅಡುಗೆಯನ್ನೆಲ್ಲ ತನಗಾಗಿಯೇ ಇರಿಸಿದಂತೆ ಭಕ್ಷಣೆಗಿಳಿಯಿತು.
ಕಣ್ಣೆದುರಲ್ಲಿ ಕರಡಿ ಅವಾಂತರ ಕಂಡ ವಧುವರರು ಮತ್ತು ಅತಿಥಿಗಳು ಕಕ್ಕಾಬಿಕ್ಕಿಯಾದರು. ನವದಂಪತಿ ಇದನ್ನು ಜಾಲತಾಣದಲ್ಲಿ ಹಂಚಿಕೊಳ್ಳುತ್ತಿದ್ದಂತೆ ವ್ಯಾಪಕ ಪ್ರತಿಕ್ರಿಯೆಗಳು ವ್ಯಕ್ತವಾಗಿವೆ.



