Kannada NewsLatestWorld
*ಎರಡು ವಾರಗಳ ಕದನ ವಿರಾಮ: ಹಾರ್ಮುಜ್ ಜಲಸಂಧಿ ಓಪನ್: ನಿಟ್ಟುಸಿರು ಬಿಟ್ಟ ಅನೇಕ ರಾಷ್ಟ್ರಗಳು*

ಪ್ರಗತಿವಾಹಿನಿ ಸುದ್ದಿ: ಎರಡು ವಾರಗಳ ಕದನ ವಿರಾಮಕ್ಕೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಒಪ್ಪಿಗೆ ಕೊಡುತ್ತಿದ್ದಂತೆ ಇತ್ತ ಇರಾನ್ ಹಾರ್ಮುಜ್ ಜಲಸಂಧಿಯನ್ನು ತೆರೆಯಲು ಅನುಮತಿ ನೀಡಿದ್ದು, ಅನೇಕ ರಾಷ್ಟ್ರಗಳು ನಿಟ್ಟುಸಿರು ಬಿಟ್ಟಿವೆ.
ಹಾರ್ಮುಜ್ ಜಲಸಂಧಿ ಓಪನ್ ಆಗಿದ್ರಿಂದ ಇರಾನ್ನಿಂದ ತೈಲ ಸಾಗಾಟ ಸುಗಮವಾಗಲಿದೆ. ಭಾರತ ಸೇರಿ ಅನೇಕ ದೇಶಗಳಿಗೆ ಇದರಿಂದ ಅನುಕೂಲವಾಗಲಿದೆ.
ಕದನ ವಿರಾಮ ಘೋಷಣೆಯ ನಂತರ, ಕಚ್ಚಾ ತೈಲ ಬೆಲೆಗಳು ತೀವ್ರವಾಗಿ ಕುಸಿದಿವೆ ಮತ್ತು ಅಮೆರಿಕದ ಷೇರುಗಳು ಏರಿಕೆಯಾಗಿವೆ.
ಇರಾನ್ ಹಾರ್ಮುಜ್ ಜಲಸಂಧಿಯ ಮೂಲಕ ಹಡಗುಗಳನ್ನು ಸುರಕ್ಷಿತವಾಗಿ ಹಾದುಹೋಗಲು ಅನುಮತಿಸಿದರೆ ಮಿಲಿಟರಿ ಕ್ರಮವನ್ನು ನಿಲ್ಲಿಸಬಹುದು ಎಂದು ಡೊನಾಲ್ಡ್ ಟ್ರಂಪ್ ಹೇಳಿದ್ದರು. ಇದೀಗ ಇರಾನ್ ಅದಕ್ಕೆ ಒಪ್ಪಿಕೊಂಡಿದೆ. ಹಾರ್ಮುಜ್ ಜಲಸಂಧಿಯನ್ನು ಎರಡು ವಾರಗಳ ಅವಧಿಗೆ ತೆರೆಯಲಾಗುವುದು ಎಂದು ಅರಾಘ್ಚಿ ಘೋಷಿಸಿದ್ದಾರೆ.




