Belagavi NewsBelgaum NewsKarnataka News

*ಗಾಳಿಯಲ್ಲಿ ಗುಂಡು ಹಾರಿಸಿ, ಚಾಕು ಹಿಡಿದು ಹುಟ್ಟುಹಬ್ಬ ಆಚರಣೆ: ಗ್ರಾಮ ಪಂಚಾಯತ್ ಸದಸ್ಯ ಅರೆಸ್ಟ್*

ಪ್ರಗತಿವಾಹಿನಿ ಸುದ್ದಿ: ಗ್ರಾಮ ಪಂಚಾಯತ್ ಸದಸ್ಯರೊಬ್ಬರು ಸಾರ್ವಜನಿಕವಾಗಿ ಗಾಳಿಯಲ್ಲಿ ಗುಂಡು ಹಾರಿಸಿ, ಕೈಯಲ್ಲಿ ಚಾಕು ಹಿಡಿದು ಹುಚ್ಚಾಟ ಮೆರೆಯುತ್ತ ಹುಟ್ಟುಹಬ್ಬ ಆಚರಣೆ ಮಾಡಿರುವ ಘಟನೆ ಬೆಳಗಾವಿಯಲ್ಲಿ ನಡೆದಿದೆ.

Home add -Advt

ಬೆಳಗಾವಿ ಜಿಲ್ಲೆಯ ರಾಯಬಾಗ ತಾಲೂಕಿನ ಕುಡುಚಿ ಪಟ್ಟಣದಲ್ಲಿ ಗ್ರಾಮ ಪಂಚಾಯತ್ ಸದಸ್ಯ ಈ ರೀತಿ ಗೂಂಡಾ ವರ್ತನೆ ತೋರಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ವಿಡಿಯೋ ವೈರಲ್ ಆಗಿದೆ. ಬಾಬಾಜಾನ್ ಖಾಲಿಮುಂಡಾಸೈ ಎಂಬಾತ ನಡುರಸ್ತೆಯಲ್ಲಿ ಗಾಳಿಯಲ್ಲಿ ಗುಂಡು ಹೊಡೆದು, ಕೈಯಲ್ಲಿ ಚಾಕು ಹಿಡಿದು ಗೂಂಡಾ ವರ್ತನೆ ತೋರಿ ಹುಟ್ಟುಹಬ್ಬ ಸಂಭ್ರಮಾಚರಣೆ ಮಾಡಿದ್ದಾರೆ. ಪೊಲೀಸ್ ಠಾಣೆ ಪಕ್ಕದಲ್ಲಿಯೇ ಇದ್ದರೂ ಯಾವುದೇ ಭಯವಿಲ್ಲದೇ ಹುಚ್ಚಾಟ ಮೆರೆದಿದ್ದಾರೆ.

ಸಾಮಾಜಿಕ ಜಾಲತಾಣಗಳಲ್ಲಿ ವಿಡಿಯೋ ವೈರಲ್ ಆಗುತ್ತಿದ್ದಂತೆ ಎಚ್ಚೆತ್ತ ಪೊಲೀಸರು ಬಾಬುಜಾನ್ ನನ್ನು ಬಂಧಿಸಿದ್ದಾರೆ. ಕುಡುಚಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Related Articles

Back to top button