ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಬೆಳಗಾವಿ ಜಿಲ್ಲಾ ಸಾಹಿತ್ಯ ಪ್ರತಿಷ್ಠಾನವು ಪದವಿಪೂರ್ವ, ಪದವಿ ಅಥವಾ ತತ್ಸಮಾನ ಪದವಿ, ಸ್ನಾತಕೋತ್ತರ ಪದವಿ ವಿದ್ಯಾರ್ಥಿಗಳಿಗಾಗಿ ಕಥಾ ಸ್ಪರ್ಧೆ ಏರ್ಪಡಿಸಿದೆ.
ಆಸಕ್ತ ಬೆಳಗಾವಿ ಜಿಲ್ಲೆಯ ವಿದ್ಯಾರ್ಥಿಗಳು ಕಥೆಗಳನ್ನು ಕಳುಹಿಸಬಹುದು. ಕೊನೆಯ ದಿನಾಂಕ ಡಿಸೆಂಬರ್ 30.
ಕಥೆಗಳನ್ನು ನೀರಜಾ ಗಣಾಚಾರಿ ಕಾರ್ಯದರ್ಶಿಗಳು, ಬೆಳಗಾವಿ ಜಿಲ್ಲಾ ಸಾಹಿತ್ಯ ಪ್ರತಿಷ್ಠಾನ, 255, ವಿಜಯಾ ರೆಸಿಡೆನ್ಸಿ, ಗುರುಪ್ರಸಾದ ಕಾಲೋನಿ, ಮುಖ್ಯ ರಸ್ತೆ , ತಿಲಕವಾಡಿ ಬೆಳಗಾವಿ – 06 ಈ ವಿಳಾಸಕ್ಕೆ ಕಳುಹಿಸಬೇಕು.
ಕಥೆಗಳನ್ನು ಕಳುಹಿಸುವವರು ಸಂಪೂರ್ಣ ಅಂಚೆ ವಿಳಾಸ ಮತ್ತು ಮೊಬೈಲ್ ಸಂಖ್ಯೆಯನ್ನು ತಪ್ಪದೇ ಬರೆದು ಡಿಸೆಂಬರ್ 30 ರೊಳಗೆ ಕಳುಹಿಸಿಕೊಡಬೇಕು. ಹೆಚ್ಚಿನ ವಿವರಗಳಿಗಾಗಿ ಮೊಬೈಲ್ ಸಂಖ್ಯೆ 9481656405, ಅಥವಾ 9845599144 ಗೆ ಸಂಪರ್ಕಿಸ ಬಹುದಾಗಿದೆ.
ಡಿ.24ರಿಂದ ದಾವಣಗೆರೆಯಲ್ಲಿ ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ 23ನೇ ಮಹಾ ಅಧಿವೇಶನ
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ