Latest

ಮಠದಲ್ಲಿ ಓದುತ್ತಿದ್ದ ಮೂವರು ಬಾಲಕರು ದಿಢೀರ್ ನಾಪತ್ತೆ

ಪ್ರಗತಿವಾಹಿನಿ ಸುದ್ದಿ; ರಾಮನಗರ: ಮಠದ ಹಾಸ್ಟೇಲ್ ಒಂದರಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದ ಮೂವರು ಬಾಲಕರು ನಾಪತ್ತೆಯಾಗಿರುವ ಘಟನೆ ರಾಮನಗರ ಜಿಲ್ಲೆಯ ದೇಗುಲ ಮಠದಲ್ಲಿ ನಡೆದಿದೆ.

ಶಿವಕುಮಾರ್ (15), ಪ್ರತಾಪ್ (16), ಕಾರ್ತಿಕ್ (15) ನಾಪತ್ತೆಯಾದ ಬಾಲಕರು. ದೇಗುಲ ಮಠದಲ್ಲಿ 9ನೇ ತರಗತಿಯಲ್ಲಿ ವ್ಯಾಂಸಮಾಡುತ್ತಿದ್ದ ಮೂವರು ಬಾಲಕರು ಮಠದ ಹಾಸ್ಟೇಲ್ ನಲ್ಲಿ ವಾಸವಾಗಿದ್ದರು.

Related Articles
Home add -Advt

ನ.9ರಂದು ರಾತ್ರಿ ಹಾಸ್ಟೇಲ್ ನಲ್ಲಿ ಊಟ ಮಾಡಿದ ಬಳಿಕ ಮಠದಿಂದ ನಾಪತ್ತೆಯಾಗಿದ್ದಾರೆ. ಪ್ರಕರಣ ತಡವಾಗಿ ಬೆಳಕಿಗೆ ಬಂದಿದೆ. ನಾಲ್ಕು ದಿನವಾದರೂ ಬಾಲಕರ ಬಗ್ಗೆ ಸುಳಿವಿಲ್ಲ.

ಈ ಹಿನ್ನೆಲೆಯಲ್ಲಿ ದೇಗುಲ ಮಠದ ಸಿಬ್ಬಂದಿ ಮೂವರು ಬಾಲಕರು ನಾಪತ್ತೆಯಾಗಿದ್ದಾರೆ ಎಂದು ಪೊಲೀಸ್ ಠಾಣೆಯಲ್ಲಿ ಮಿಸ್ಸಿಂಗ್ ಕಂಪ್ಲೇಂಟ್ ದಾಖಲಿಸಿದ್ದಾರೆ. ಬಾಲಕರ ಪತ್ತೆಗಾಗಿ ಪೊಲಿಸರು ತೀವ್ರ ಹುಡುಕಾಟ ನಡೆಸಿದ್ದಾರೆ.

ಗೋಕಾಕ್ ನಗರದಾದ್ಯಂತ ಪೊಲೀಸ್ ಬಂದೋಬಸ್ತ್; ಎಲ್ಲೆಲ್ಲೂ ಖಾಕಿ ಕಣ್ಗಾವಲು

https://pragati.taskdun.com/latest/gokakpanchamasali-samaveshapolice-securiity/

Related Articles

Back to top button