ಚಾಲಕ ಸಾವು
ಪ್ರಗತಿವಾಹಿನಿ ಸುದ್ದಿ, ಬೆಳಗಾವಿ– ಚಾಲಕನ ನಿಯಂತ್ರಣ ತಪ್ಪಿ ಕಸ ವಿಲೇವಾರಿ ವಾಹನ ಕಾಲುವೆಗೆ ಉರುಳಿಬಿದ್ದು ಚಾಲಕ ಸ್ಥಳದಲ್ಲಿಯೇ ಮೃತಪಟ್ಟಿರುವ ಘಟನೆ ಬೆಳಗಾವಿ ಜಿಲ್ಲೆಯಲ್ಲಿ ನಡೆದಿದೆ
ಇಂದು ಸವದತ್ತಿ ತಾಲೂಕಿನ ಮುನವಳ್ಳಿ ಪಟ್ಟಣದ ಹೊರವಲಯದಲ್ಲಿ ಮಲಪ್ರಭಾ ನದಿಯ ಬಾಳೇಕುಂದರಗಿ ಎಡೆದಂಡೆ ಕಾಲುವೆಗೆ ಪುರಸಭೆಗೆ ಸೇರಿದ ಕಸ ವಿಲೇವಾರಿ ವಾಹನ ಚಾಲಕನ ನಿಯಂತ್ರಣ ತಪ್ಪಿ ಉರುಳಿ ಬಿದ್ದು ಅವಘಡ ಸಂಭವಿಸಿದ್ದು, ಚಾಲಕ ಮೃತ ಪಟ್ಟಿದ್ದಾನೆ.
ಪುರಸಭೆ ವಿಲೇವಾರಿ ವಾಹನ ಚಾಲಕ 48 ವರ್ಷದ ಗದಿಗೆಪ್ಪ ಕಾಮನ್ನವರ ಸ್ಥಳದಲ್ಲಿಯೇ ಮೃತಪಟ್ಟಿದ್ದರೆ, ಹೆಲ್ಪರ್ ಮಂಜುನಾಥ ಸಿಂಗನ್ನವರ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಸ್ಥಳಕ್ಕೆ ಸವದತ್ತಿ ಪೋಲಿಸರು ಭೇಟಿ ನೀಡಿ ಪರಿಶಿಲನೆ ನಡೆಸಿದ್ದಾರೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ