ಪ್ರಗತಿವಾಹಿನಿ ಸುದ್ದಿ; ಬೆಳಗಾವಿ: ಅಥಣಿ-ಪಂಚಾಯತ ರಾಜ್ ಇಲಾಖೆ, ಭಾರತೀಯ ಸರ್ವೆಕ್ಷಣಾ ಇಲಾಖೆ ಮತ್ತು ಭೂಮಾಪನ ಇಲಾಖೆ ಇವರ ಸಹಯೋಗದಲ್ಲಿ ಭಾರತ ಸರಕಾರದ ಸ್ವಾಮಿತ್ವ ಯೋಜನೆ ಗ್ರಾಮೀಣ ಆಸ್ತಿಗಳ ಗಣಕೀಕೃತ “ಅಸ್ತಿ ಪತ್ರ” ವಿತರಣಾ ಸಮಾರಂಭವು ಅಥಣಿ ತಾಲೂಕಿನ ಬಡಚಿ ಗ್ರಾಮದ ಬಿರೇಶ್ವರ ದೇವಾಲಯದಲ್ಲಿ ಜರುಗಿತು.
ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಡಿಸಿಎಂ ಲಕ್ಷ್ಮಣ ಸವದಿ ಹಕ್ಕು ಪತ್ರ ವಿತರಿಸಿ ಮಾತನಾಡಿ ಕೇಂದ್ರದ ಈ ಮಹತ್ವಾಕಾಂಕ್ಷೆಯ ಯೋಜನೆಯು ಸಾರ್ವಜನಿಕರಿಗೆ ತಮ್ಮ ಆಸ್ತಿಯ ನಿಖರ ಮಾಹಿತಿ ನೀಡಲಿದ್ದು ಈ ಹಿಂದೆ ಇದ್ದಂತಹ ತೊಂದರೆಗಳು ದೂರಾಗಿವೆ. ಬೆಳಗಾವಿ ವಲಯದಲ್ಲಿ ಸ್ವಾಮಿತ್ವ ಯೋಜನೆಯ ಹಕ್ಕು ಪತ್ರ ಪಡೆದ ಮೊದಲ ಗ್ರಾಮ ಬಡಚಿಯಾಗಿದೆ. ಬ್ಯಾಂಕುಗಳಲ್ಲಿ ಆಸ್ತಿ ಪತ್ರ ನೀಡುವ ಮೂಲಕ ಸಾಲವನ್ನು ಪಡೆಯುವುದು ಅತೀ ಸರಳವಾಗಿದೆ ಎಂದರು. ಈ ಯೋಜನೆಯಿಂದ ಗ್ರಾಮಗಳಲ್ಲಿ ಪ್ರತಿಯೊಬ್ಬರ ಮನೆಯನ್ನು ನಿಖರವಾಗಿ ತಿಳಿಯಲು ಸಾಧ್ಯ ಹಾಗೂ ಮುಂದಿನ ತಲೆಮಾರಿನ ಜನರಿಗೆ ಈ ಯೋಜನೆಯಿಂದ ಬಹು ಉಪಯೋಗವಾಗವಾಗುವುದು ಎಂದರು.
ಬೆಳಗಾವಿ ಜಿಲ್ಲೆಯ ಭೂ ದಾಖಲೆಗಳ ಉಪ ನಿರ್ದೇಶಕರಾದ ಮೋಹನ ಶಿವನ್ನವರ ಮಾತನಾಡಿ ಗ್ರಾಮ ವ್ಯಾಪ್ತಿಯಲ್ಲಿ ಬ್ರಿಟಿಷ್ ಕಾಲದಿಂದಲೂ ಗ್ರಾಮ ಠಾಣಾ ಎಂಬುವುದಾಗಿ ಸೂಚಿಸಲಾಗಿತ್ತು ಆದರೆ ಈ ಯೋಜನೆಯಡಿ ಈಗ ಪ್ರತಿಯೊಂದು ಆಸ್ತಿಯ ನಿಖರ ಮಾಹಿತಿ ನೀಡುವುದು. ಬೆಳಗಾವಿ ಜಿಲ್ಲೆಯಲ್ಲಿ ಮೊದಲಿಗೆ ಅಥಣಿ ತಾಲೂಕಿನ 6 ಹಳ್ಳಿಗಳನ್ನು ಆಯ್ಕೆ ಮಾಡಲಾಗಿ ಯೋಜನೆ ಕಾರ್ಯಗತ ಗೊಳಿಸಲಾಯಿತು ಎಂದರು.
ಈ ಸಂದರ್ಭದಲ್ಲಿ ಅಥಣಿಯ ಸಹಾಯಕ ಭೂ ದಾಖಲೆ ನಿರ್ದೇಶಕ ಪುನೀತ್ ಪಾಸೋಡಿ, ಗ್ರಾ. ಪಂ ಅಧ್ಯಕ್ಷೆ ಸುನೀತಾ ಚವಾಣ್, ಬಡಚಿ ಪಿಕೆಪಿಎಸ್ ಸೈಬನ್ನ ಕಮತಗಿ, ಬೆಳಗಾವಿ ಕೆಎಂಎಫ್ ನಿರ್ದೇಶಕ ಅಪ್ಪಾಸಾಬ ಅವತಾಡೆ, ಭೂ ಮಾಪಕರಾದ ಎಸ್ ಎಸ್ ಬಿರಾದಾರ, ಜಿಟಿ ಗುಗ್ಗರಿ, ಆರ್ ಎನ್ ಬಿರಾದಾರ, ಮಹಾಂತೇಶ ಅಥಣಿ, ಶ್ರೀನಿವಾಸ ಸಿಂಧೆ, ಶರಣಗೌಡ ಬಿರಾದಾರ, ಮೇಘಾ ಕಿರಗಿ, ಶಾರದಾ ಗಾವಡೆ, ಎಸ್ ಕಾತ್ರಾಳ, ಎಮ್ ಡಿ ಮಜಲಿ, ಎಂ ಡಿ ಮಾದರ, ತಪಾಸಕರಾದ ಎನ್ ಬಿ ರಾಥೋಡ್, ಜಾರ್ಜ್ ಫರ್ನಾಂಡೀಸ್ ಅನೇಕ ಗ್ರಾಮಸ್ಥರು ಉಪಸ್ಥಿತಿಯಿದ್ದರು.
ರಮೇಶ್ ಜಾರಕಿಹೊಳಿ ಸಿಡಿ ಕೇಸ್; ತನಿಖೆ ಮುಕ್ತಾಯ
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ