Latest

ಮದುವೆಗೆ ಒಂದು ದಿನ ಮೊದಲು ವರ ಸಾವು

ಪ್ರಗತಿವಾಹಿನಿ ಸುದ್ದಿ; ರಾಯಚೂರು: ಮದುವೆಗೆ ಒಂದು ದಿನ ಮೊದಲು ವರ ಹೃದಯಾಘಾತದಿಂದ ಸಾವನ್ನಪ್ಪಿರುವ ಘಟನೆ ರಾಯಚೂರು ಜಿಲ್ಲೆಯ ಸಿಂಧನೂರು ತಾಲೂಕಿನ ಜವಳಗೇರಾ ಗ್ರಾಮದಲ್ಲಿ ನಡೆದಿದೆ.

ಮೃತನನ್ನು ಹಲುಗಪ್ಪ (36) ಎಂದು ಗುರುತಿಸಲಾಗಿದೆ. ಇಂದು ಹಲುಗಪ್ಪನ ವಿವಾಹ ಸಿಂಧನೂರಿನ ಶರಣ ಬಸವೇಶ್ವರ ದೇಗುಲದಲ್ಲಿ ನಡೆಯಬೇಕಿತ್ತು. ವಿವಾಹಕ್ಕೆ ಭರ್ಜರಿ ಸಿದ್ಧತೆಯೂ ನಡೆದಿತ್ತು. ಆದರೆ ಹೃದಯಾಘಾತಕ್ಕೀಡಾಗಿ ವರ ಹಲುಗಪ್ಪ ಸಾವನ್ನಪ್ಪಿದ್ದಾರೆ.

Related Articles
Home add -Advt

ಹಲುಗಪ್ಪ ಗ್ರಾಮ ಪಂಚಾಯಿತಿಯಲ್ಲಿ ಸೆಕೆಂಡ್ ಡಿವಿಷನ್ ಅಸಿಸ್ಟೆಂಟ್ ಆಗಿ ಕಾರ್ಯ ನಿರ್ವಹಿಸುತ್ತಿದ್ದರು.

Related Articles

Back to top button