Kannada NewsLatest

ಹಿಂಡಲಗಾ ಜೈಲಿನಲ್ಲಿದ್ದುಕೊಂಡೇ ಮಹಿಳೆಗೆ ಕರೆ ಮಾಡಿ ಧಮ್ಕಿ ಹಾಕಿದ ಕೊಲೆ ಆರೋಪಿ

ಪ್ರಗತಿವಾಹಿನಿ ಸುದ್ದಿ; ಬೆಳಗಾವಿ: ಕೊಲೆ ಕೇಸ್ ನಲ್ಲಿ ಹಿಂಡಲಗಾ ಜೈಲು ಸೇರಿರುವ ರೌಡಿ ಶೀಟರ್ ಒಬ್ಬ ಮಹಿಳೆಯೋರ್ವರಿಗೆ ಫೋನ್ ಮಾಡಿ ಹಣ ನಿಡುವಂತೆ ಧಮ್ಕಿ ಹಾಕಿರುವ ಘಟನೆ ಬೆಳಕಿಗೆ ಬಂದಿದೆ.

ಬೆಳಗಾವಿ ಹಿಂಡಲಗಾ ಜೈಲಿನಲ್ಲಿರುವ ಆರೋಪಿ ತೌಸಿಫ್ ಜೈಲಿನಲ್ಲಿದ್ದುಕೊಂಡೇ ಧಾರವಾಡ ಮೂಲದ ಶೆಟ್ಟರ್ ಕಾಲೋನಿಯ ಸ್ನೇಹಾ ದೇಸಾಯಿ ಎಂಬ ಉದ್ಯಮಿಗೆ ಧಮ್ಕಿ ಹಾಕಿ ತನ್ನ ಬೇಲ್ ಗಾಗಿ 3 ಲಕ್ಷ ರೂ ಹಣ ವಸೂಲಿ ಮಾಡಿದ್ದಾನೆ ಎಂದು ತಿಳಿದುಬಂದಿದೆ.

Home add -Advt

ಸ್ನೇಹಾ ಹಾಗೂ ತೌಸಿಫ್ ಎಸ್ ಎಸ್ ಎಲ್ ಸಿಯಲ್ಲಿ ಸ್ನೇಹಿತರು. ಸ್ನೇಹಾ ತನ್ನ ಉದ್ಯಮಕ್ಕೆ ತೌಸಿಫ್ ಬಳಿ ಹಣ ಪಡೆದು ಬಳಿಕ ಬಡ್ಡಿ ಸಮೇತ ಹಿಂದಿರುಗಿಸಿದ್ದರು. ಆದರೆ ಇದನ್ನೇ ಬಂಡವಾಳ ಮಾಡಿಕೊಂಡ ತೌಸಿಫ್ ಈಗ ಸ್ನೇಹಾಗೆ ಕರೆ ಮಾಡಿ ಬೆದರಿಕೆ ಹಾಕಿದ್ದಲ್ಲದೇ ತನ್ನ ಬೇಲ್ ಗಾಗಿ ಹಣ ನೀಡಿವುಂತೆ ಹೇಳಿ ವಸೂಲಿ ಮಾಡಿದ್ದಾನೆ. ಒಟ್ಟಾರೆ ಬೆಳಗಾವಿ ಹಿಂಡಲಗಾ ಜೈಲಿನ ಕರ್ಮಕಾಂಡ ಇದೀಗ ಬಯಲಾಗಿದೆ.

Related Articles

Back to top button