Kannada NewsLatest

ಬೆಳಗಾವಿ: ಮರಾಠಿ ನಾಮಫಲಕಕ್ಕೆ ಮಸಿ ಬಳಿದು; ಶಿವಸೇನೆ ಕಚೇರಿ ಮೇಲೆ ದಾಳಿ; ಕರವೇ ಆಕ್ರೋಶ

 

Home add -Advt

ಪ್ರಗತಿವಾಹಿನಿ ಸುದ್ದಿ; ಬೆಳಗಾವಿ: ಕೊಲ್ಹಾಪುರದಲ್ಲಿ ಕನ್ನಡ ನಾಮಫಲಕಗಳಿಗೆ ಶಿವಸೇನೆ ಕಾರ್ಯಕರ್ತರು ಮಸಿ ಬಳಿದ ಪ್ರಕರಣಕ್ಕೆ ಕರವೇ ಕಾರ್ಯಕರ್ತರು ತಿರುಗೇಟು ನೀಡಿದ್ದು, ಬೆಳಗಾವಿಯಲ್ಲಿ ಮರಾಠಿ ನಾಮಫಲಕಗಳಿಗೆ ಮಸಿ ಬಳಿದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಬೆಳಗಾವಿ ಹೊರವಲಯದ ಗಾಂವಕರಿ ಹೋಟೆಲ್, ಡಾಬಾ, ಅಂಗಡಿ ಮುಂಗಟ್ಟುಗಳ ಮೇಲೆ ಹಾಕಿದ್ದ ಮರಾಠಿ ನಾಮಫಲಕಗಳಿಗೆ ಮಸಿ ಬಳಿದು, ಕೆಲ ನಾಮಫಲಕಗಳನ್ನು ಹರಿದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಈ ನಡುವೆ ಪೊಲೀಸರು ಹಾಗೂ ಕರವೇ ಕಾರ್ಯಕರ್ತರ ನಡುವೆ ವಾಗ್ವಾದ ನಡೆದಿದ್ದು, ಶಿವಸೇನೆ ನಾಯಕನ ವಿರುದ್ಧ ಕರವೇ ಕಾರ್ಯಕರ್ತರು ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಅಲ್ಲದೇ ಬೆಳಗಾವಿಯಲ್ಲಿ ಶಿವಸೇನೆ ಮುಖಂಡನ ಕಾರಿನ ಫಲಕವನ್ನು ಕಿತ್ತು ಹಾಕಿದ್ದಾರೆ.

ಶಿವಸೇನೆಯಿಂದ ಮುಂದುವರೆದ ಪುಂಡಾಟ; ಕನ್ನಡದಲ್ಲಿರುವ ಬೋರ್ಡ್ ಗಳಿಗೆ ಕಪ್ಪು ಮಸಿ

Related Articles

Back to top button