
ಪ್ರಗತಿವಾಹಿನಿ ಸುದ್ದಿ; ಖಾನಾಪುರ: ನೀರಿನ ಹೊಂಡದಲ್ಲಿ ಬಿದ್ದು ಇಬ್ಬರು ಬಾಲಕರು ಸಾವನ್ನಪ್ಪಿರುವ ಘಟನೆ ಖಾನಾಪುರ ತಾಲೂಕಿನ ಗಣೆಬೈಲ್ ನಲ್ಲಿ ನಡೆದಿದೆ.
ಗಣೆಬೈಲ್ ಗ್ರಾಮದ 6ನೇ ತರಗತಿಯ ವಿದ್ಯಾರ್ಥಿ ವಿಠಲ ಪರಶುರಾಮ ನಿಲಜಕರ್ ಹಾಗೂ 8 ವರ್ಷದ ಭೂತನಾಥ ದಿಲೀಪ್ ನಿಲಜಕರ್ ಮೃತ ಬಾಲಕರು.
ನೀರಿನ ಹೊಂಡದಲ್ಲಿ ಸಿಲುಕಿದ್ದ ದನಗಳನ್ನು ನೋಡಲೆಂದು ಹೋಗಿದ್ದ ಓರ್ವ ಬಾಲಕ ಕಾಲು ಜಾರಿ ಹೊಂಡಕ್ಕೆ ಬಿದ್ದಿದ್ದಾನೆ. ಆತನನ್ನು ರಕ್ಷಿಸಲು ಹೋಗಿ ಇನ್ನೋರ್ವ ಬಾಲಕ ಕೂಡ ನೀರುಪಾಲಾಗಿದ್ದಾನೆ ಎನ್ನಲಾಗಿದೆ. ಇಬ್ಬರು ಬಾಲಕರು ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ್ದಾರೆ.
ಕೊರೋನಾ 3ನೇ ಅಲೆಯಿಂದ ಮಕ್ಕಳ ರಕ್ಷಣೆ: ಶಶಿಕಲಾ ಜೊಲ್ಲೆ ವಿಶೇಷ ಸಭೆ
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ