Kannada NewsLatest

ಚಿಕ್ಕೋಡಿ ಲೋಕಸಭಾ ವ್ಯಾಪ್ತಿಯ 650 ಹಳ್ಳಿಗಳಲ್ಲಿ ಡಿಜಿಟಲ್ ಸೇವಾ ಕೇಂದ್ರ ತೆರೆಯುವ ಗುರಿ: ಸಂಸದ ಅಣ್ಣಾಸಾಹೇಬ ಜೊಲ್ಲೆ

ಪ್ರಗತಿವಾಹಿನಿ ಸುದ್ದಿ; ಚಿಕ್ಕೋಡಿ: ಯಕ್ಸಂಬಾ ಪಟ್ಟಣದ ಶಿವಶಂಕರ ಜೊಲ್ಲೆ ಪಬ್ಲಿಕ್ ಶಾಲೆಯ ಸಭಾಗೃಹದಲ್ಲಿ, ಇ-ಗವರ್ನನ್ಸ ಸರ್ವಿಸ್ ಇಂಡಿಯಾ ಲಿ. (ಡಿಜಿಟಲ್ ಸೇವಾ ಕೇಂದ್ರ) ಹಾಗೂ ಜೊಲ್ಲೆ ಉದ್ಯೋಗ ಸಮೂಹ ಯಕ್ಸಂಬಾದ ಸಹಯೋಗದೊಂದಿಗೆ ಕಾಮನ್ ಸರ್ವಿಸ್ ಸೆಂಟರ್ (ಸಿ.ಎಸ್.ಸಿ) ತರಬೇತಿ ಕಾರ್ಯಗಾರಕ್ಕೆ ದ್ವೀಪ ಪ್ರಜ್ವಲಿಸುವ ಮೂಲಕ ಚಿಕ್ಕೋಡಿ ಲೋಕಸಭೆ ಸಂಸದರಾದ ಅಣ್ಣಾಸಾಹೇಬ ಜೊಲ್ಲೆ ಯವರು ಚಾಲನೆ ನೀಡಿದರು.

ಈ ವೇಳೆ ಮಾತನಾಡಿದ ಅವರು ನನ್ನ ಲೋಕಸಭಾ ವ್ಯಾಪ್ತಿಯ ಪ್ರಜೆಗಳಿಗೆ ಅವರ ಗ್ರಾಮದಲ್ಲಿ ಎಲ್ಲ ಸೆವೆಗಳು ಸಿಗಬೇಕು. ಬೇರೆ ಪಟ್ಟಣ ಅಥವಾ ತಾಲುಕಿಗೆ ಹೋಗಿ ಸೇವೆಗಳನ್ನು ಪಡೆದುಕೊಳ್ಳುತ್ತಿದ್ದಾರೆ. ಅವರ ಗ್ರಾಮದಲಿ ಸೇವೆಯನ್ನು ಪಡೆದುಕೊಳ್ಳುವ ನಾಗರಿಕ ಸೇವೆಗಳನ್ನು ಒದಗಿಸುವ ನಿಟ್ಟಿನಲ್ಲಿ ಡಿಜಿಟಲ್ ಸೇವಾ ಕೇಂದ್ರ ಕೇಂದ್ರಗಳನ್ನು ತೆರೆಯುವ ನಿರ್ಧಾರ ತೆಗೆದುಕೊಳ್ಳಲಾಗಿದೆ. ಈ ಕೇಂದ್ರಗಳಲ್ಲಿ ಜಮೀನು ಉತಾರ, ಆಧಾರ ಕಾರ್ಡ, ರೇಷನ್ ಕಾರ್ಡ, ಪ್ಯಾನ್ ಕಾರ್ಡ ಫಸಲ್ ಭೀಮಾ ಯೋಜನೆ, ಆಯುಷ್ಮಾನ್ ಭಾರತ್, ಬಸ, ರೇಲ್ವೆ ಟಿಕೇಟ್ ಬುಕ್ಕಿಂಗ್ ಇನ್ಸುರನ್ಸ, ಕಿಸಾನ ಕ್ರೆಡಿಟ್ ಕಾರ್ಡ, ಪಾಸಫೋರ್ಟ, ಫಾಸಟ್ಯಾಗ, ಪ್ರದಾನಮಂತ್ರಿ ಲಘು ವ್ಯಾಪಾರ ಮನ ಧನ ಯೋಜನೆ ಸೇರಿದಂತೆ 100 ಕ್ಕಿಂತ ಹೆಚ್ಚಿನ ನಾಗರಿಕ ಸೇವೆಗಳನ್ನು ಈ ಕೇಂದ್ರಗಳಲ್ಲಿ ಒದಗಿಸಲಾಗುತ್ತದೆ. ಈ ನಿಟ್ಟಿನಲ್ಲಿ ಚಿಕ್ಕೋಡಿ ಲೋಕಸಭಾ ವ್ಯಾಪ್ತಿಯ ೬೫೦ ಹಳ್ಳಿಗಳಲ್ಲಿ ಈ ಕೇಂದ್ರಗಳನ್ನು ತೆರೆಯುವ ಗುರಿಯಿಟ್ಟುಕೊಂಡಿದ್ದೇವೆ ಎಂದು ಹೇಳಿದರು.

ಈ ಸಂದರ್ಭದಲ್ಲಿ ಸಿದ್ಧಿವಿನಾಯಕ ಸೌºರ್ದ ಸಹಕಾರಿ ಸಂಸ್ಥೆಯ ಸಂಸ್ಥಾಪಕರಾದ ಸಂಜಯ ಅಡಕೆ, ಕರ್ನಾಟಕ ರಾಜ್ಯ ಗ್ರಾಮೀಣ ಇ-ಸ್ಟೋರ್ ವ್ಯವಸ್ಥಾಪಕ ಕಿರಣ ಜೋಶಿ, ಸಿ.ಎಸ್.ಸಿ ಜಿಲ್ಲಾ ವ್ಯವಸ್ಥಾಪಕರದ ವೀರೇಶ ಪುರಾಣಿಕಮಠ, ಸಂಜಯ ಅರಗೆ ಹಾಗೂ ಆಕಾಂಕ್ಷಿಗಳು ಉಪಸ್ಥಿತರಿದ್ದರು.

ಜಾಗನೂರ ಗ್ರಾಮವನ್ನು ಆದರ್ಶ ಗ್ರಾಮ ಮಾಡಲು ಯತ್ನ; ಮಹಾಂತೇಶ ಕವಟಗಿಮಠ

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button