Karnataka News

*ಬೆಳಗಾವಿ: ಅಣ್ಣನಿಂದಲೇ ತಮ್ಮನ ಬರ್ಬರ ಹತ್ಯೆ*

ಪ್ರಗತಿವಾಹಿನಿ ಸುದ್ದಿ: ಚನ್ನಾಗಿ ಇದ್ದ ಅಣ್ಣ-ತಮ್ಮನ ನಡುವೆ ಕ್ಷುಲ್ಲಕ ಕಾರಣಕ್ಕೆ ಜಗಳ ಆರಂಭವಾಗಿ ಅಣ್ಣನೇ ತಮ್ಮನನ್ನು ಹತ್ಯೆಗೈದ ಘಟನೆ ನಡೆದಿದೆ.

ಬೆಳಗಾವಿ ತಾಲೂಕಿನ ಎಸ್.ಧಾವಣೆ ಗ್ರಾಮದಲ್ಲಿ ಈ ಘಟನೆ ನಡೆದಿದೆ. ಲಕ್ಷ್ಮಣ್ ಬರಮಾ ಬಾಳೇಕುಂದ್ರಿ (28) ಕೊಲೆಯಾದ ತಮ್ಮ. ಮಾರುತಿ ಕೊಲೆ ಮಾಡಿದ ಆರೋಪಿ.

ಅಣ್ಣ-ತಮ್ಮ ಇಬ್ಬರೂ, ಕಷ್ಟಪಟ್ಟು ದುಡಿದು ಹೊಸ ಮನೆ ಕಟ್ಟಿಸಿದ್ದರು. ಮನೆ ಕಟ್ಟಿದ ಬಳಿಕ ಮದುವೆ ಮಾಡಿಕೊಳ್ಳು ಬಗ್ಗೆಯೋ ಯೋಚಿಸಿದ್ದರು. ಹೀಗಿರುವಾಗ ತಮ್ಮ ಲಕ್ಷ್ಮಣ ಕುಡಿತದ ಚಟ ಹೆಚ್ಚಿಸಿಕೊಂಡಿದ್ದ. ಇದೇ ಕಾರಣ ಅಣ್ಣ-ತಮ್ಮನ ನಡುವೆ ಗಲಾಟೆ ನಡೆದಿದ್ದು, ಕೋಪದಲ್ಲಿ ಅಣ್ಣ ಮಾರುತಿ ತಮ್ಮನನ್ನು ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡಿದ್ದಾನೆ.

ಪ್ರಕರಣ ಸಂಬಂಧ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ. ಬೆಳಗಾವಿ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.


ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button