ಪ್ರಗತಿವಾಹಿನಿ ಸುದ್ದಿ; ಬೆಳಗಾವಿ: ಬೆಳಗಾವಿ ಜಿಲ್ಲಾ ಸಾಹಿತ್ಯ ಪ್ರತಿಷ್ಠಾನವು 2022 ನೇ ಸಾಲಿನ ಸಿರಿಗನ್ನಡ ಗೌರವ ಮತ್ತು 2021 ನೇ ಸಾಲಿನ ಸಿರಿಗನ್ನಡ ಪುಸ್ತಕ ಪ್ರಶಸ್ತಿಯನ್ನು ಪ್ರಕಟಿಸಿದೆ.
ಸಿರಿಗನ್ನಡ ಗೌರವ ಪ್ರಶಸ್ತಿಗೆ ಪ್ರೋ ರಾಜಶೇಖರ ಎಂ ಕರಡಿಗುದ್ದಿ ಮತ್ತು ಡಾ ಮಾಧವ ದಿಕ್ಷಿತ ಭಾಜನರಾಗಿದ್ದಾರೆ. ಸಿರಿಗನ್ನಡ ಪುಸ್ತಕ ಪ್ರಶಸ್ತಿಗೆ ಶ್ರೀ ಈರಯ್ಯ ಕಿಲ್ಲೇದಾರ ಅವರ ವೈಚಾರಿಕ ಲೇಖನ ಸಂಗ್ರಹ “ಉರಿಯ ಪೇಟೆಯಲ್ಲಿ” ಕೃತಿ ಮತ್ತು ಶ್ರೀ ಚಂದ್ರಶೇಖರ ಪೂಜಾರ ಅವರ ಗಜಲ್ ಸಂಕಲನ “ಬೆಳಕ ನಿಚ್ಚಣಿಕೆ” ಕೃತಿ ಆಯ್ಕೆಯಾಗಿರುತ್ತದೆ.
ವಿವಿಧ ಜೀವನಮಾನ ಸಾಧನೆ ಪ್ರಶಸ್ತಿಗಳು:
ಪ್ರೋ ಪ್ರಲ್ಹಾದಕುಮಾರ ಬಾಗೋಜಿ ದತ್ತಿ ಪ್ರಶಸ್ತಿ ಲೇಖಕರ ಜೀವಮಾನ ಸಾಧನೆಗಾಗಿ ಡಾ ಸಿ ಕೆ ನಾವಲಗಿ, ಡಾ ಲತಾ ಗುತ್ತಿ ದತ್ತಿ ನಿಧಿ ಪ್ರಶಸ್ತಿ ಲೇಖಕಿಯರ ಜೀವನಮಾನ ಸಾಧನೆಗಾಗಿ ಶ್ರೀಮತಿ ಶೀಲಾ ಅಂಕೋಲಾ, ದಿ ಸುಮನ ಗುರುನಾಥ ಹುದಲಿ ದತ್ತಿ ನಿಧಿ ಪ್ರಶಸ್ತಿ ಸಾಮಾಜಿಕ ಮತ್ತು ಸಹಕಾರಿ ಕ್ಷೇತ್ರದ ಸಾಧನೆಗಾಗಿ ಶೈಲಜಾ ಬಿಂಗೆ, ದಿ, ವೆಂ ಲ. ಜೋಶಿ ಸ್ಮಾರಕ ದತ್ತಿ ಪ್ರಶಸ್ತಿಗೆ ಬಾಳೇಶ ವೀರಪ್ಪ ಚಿನಗುಡಿ (ಮಾಧ್ಯಮಿಕ), ತಾರಾಮತಿ ಪರ್ವತರಾಜ ಪಾಟೀಲ ದತ್ತಿ ಪ್ರಶಸ್ತಿ ಜಿಲ್ಲೆಯ ಉತ್ತಮ ಪ್ರಕಾಶನ ಸಂಸ್ಥೆಗೆ ರಾಜಗುರು ಸಂಸ್ಥಾನಮಠ ಪ್ರಕಾಶನ, ಕಿತ್ತೂರು, ಸಂಗೀತ ಪ್ರತಿಷ್ಠಾನ ಬೆಳಗಾವಿಯ ದತ್ತಿ ನಿಧಿಯ “ವೇಣುಗಾನ ಸಂಗೀತ ಪ್ರಶಸ್ತಿ”ಗೆ ಮುಕುಂದ ಗೋರೆ ಇವರಿಗೆ ನೀಡಲಾಗಿದೆ.
ವಿವಿಧ ದತ್ತಿ ನಿಧಿ ಪುಸ್ತಕ ಪ್ರಶಸ್ತಿಗಳು:
ಕೆ ಚಂದ್ರಮೌಳಿ ದತ್ತಿನಿಧಿ ಪ್ರಶಸ್ತಿ – ಡಾ ಬಸವರಾಜ ಜಗಜಂಪಿಯವರ ಪ್ರವಾಸ ಕಥನ “ಯೂರೋಪ ಸಾಂಸ್ಕೃತಿಕ ಸೌರಭ” ಕೃತಿಗೆ, ಪಿ ವಿಜಯಕುಮಾರ ದತ್ತಿ ಪ್ರಶಸ್ತಿ – ಬಿ ಎಸ್ ಜಗಾಪುರ ಅವರ ಮಕ್ಕಳ ಸಾಹಿತ್ಯ “ಜಾಣ ಬಾಲಕ” ಕೃತಿಗೆ, ದಿ ಶ್ರೀದೇವಿ ದಾಸಪ್ಪ ಶಾನಬಾಗ ಸ್ಮಾರಕ ದತ್ತಿ ಪ್ರಶಸ್ತಿ ಶ್ರೀ ಡಾ ಜೆ ಪಿ ದೊಡ್ಡಮನಿ ಅವರ ಅನುವಾದ ಸಾಹಿತ್ಯ “ಭಾರತ ದೇಶದ ಪ್ರಥಮ ಶಿಕ್ಷಕಿ-ಸಾವಿತ್ರಿಬಾಯಿ ಫುಲೆ” ಕೃತಿಗೆ, ಡಾ ಹಣಮಂತರಾವ ಸವಣೂರ ಸ್ಮಾರಕ ದತ್ತಿ ಪ್ರಶಸ್ತಿಗೆ ಶ್ರೀ ಬಸವಣ್ಣೆಪ್ಪ ಕಂಬಾರ ಅವರ ಕಥಾ ಸಂಕಲನ “ಆರನೇ ಬೆರಳು” ಕೃತಿಗೆ, ಶ್ರೀ ಎಸ್ ಎಮ್ ಕುಲಕರ್ಣಿ ಷಷ್ಠಬ್ಧಿ ಸಮಿತಿ ದತ್ತಿ ನಿಧಿ ಪ್ರಶಸ್ತಿ ಡಾ ಬಸು ಬೇವಿನಗಿಡದ ಅವರ ವಿಮರ್ಶಾ “ಬೆಳಕ ತೋರಣ” ಕೃತಿಗೆ, ದಿ ಚಂದ್ರವ್ವ ಧರ್ಮಾಜಿ ಅನಗೋಳ ಸ್ಮಾರಕ ದತ್ತಿ ಪ್ರಶಸ್ತಿ ಡಾ ಶೋಭಾ ನಾಯಕ ಅವರ ಅವನ ಸಂಕಲನ “ಶಯ್ಯಾಗಾರದ ಸುದ್ದಿಗಳು ಕೃತಿಗೆ, ಡಾ ಎಮ್ ಎಲ್ ತುಕ್ಕಾರ ಅಭಿನಂದನ ಸಮಿತಿ ದತ್ತಿ ಪ್ರಶಸ್ತಿ ಶ್ರೀಮತಿ ರಂಜನಾ ನಾಯಿಕ ಅವರ ನಾಟಕ ಸಂಕಲನ – “ಇಪ್ಪತ್ತೊಂದು ನೆರಳು ಬೆಳಕಿನಾಟ” ಕೃತಿಗೆ, ಶಿವಕವಿ ಉಳವೀಶ ಹುಲೇಪ್ಪನವರ ಸ್ಮಾರಕ ದತ್ತಿ ನಿಧಿ ಪ್ರಶಸ್ತಿ ಚುಟುಕು ಸಾಹಿತ್ಯ – ಅಶೋಕ ಮಳಗಲಿ ಅವರ “ನೂರೊಂದು ಚುಟುಕು ಚಟಾಕಿಗಳು” ಕೃತಿಗೆ, ಅಪ್ಪಾಸಾಹೇಬ ಸದರಜೋಶಿ ಕುಟುಂಬದ ದತ್ತಿ ಪ್ರಶಸ್ತಿ ವೈಚಾರಿಕ ಲೇಖನಗಳು ಡಾ ಆರ್ ಬಿ ಚಿಲಮಿ ಅವರ “ಬದುಕಿನ ಅನ್ಯನ್ಯತೆಗೆ ದಾರಿದೀಪಗಳು” ಕೃತಿಗೆ ನೀಡಲಾಗಿದೆ ಎಂದು ಪ್ರತಿಷ್ಠಾನದ ಕಾರ್ಯದರ್ಶಿ ನೀರಜಾ ಗಣಾಚಾರಿ ಪ್ರಟಣೆಯಲ್ಲಿ ತಿಳಿಸಿದ್ದಾರೆ.
೨೦೨೧ ನೇ ಸಾಲಿನ ಪುಸ್ತಕಗಳನ್ನು ಬಿ ಆರ್ ಪೊಲೀಸ್‌ಪಾಟೀಲ ಮತ್ತು ಶ್ರೀಮತಿ ಸಂಧ್ಯಾ ಹೊನಗುಂಟಕರ ಅವರು ಮೌಲ್ಯಮಾಪನ ಮಾಡಿರುತ್ತಾರೆ. ಅವರಿಗೆ ಬೆಳಗಾವಿ ಸಾಹಿತ್ಯ ಪ್ರತಿಷ್ಠಾನವು ಚಿರಋಣಿಯಾಗಿರುತ್ತದೆ. ಎಲ್ಲ ಪ್ರಶಸ್ತಿಗೆ ಭಾಜನರಾದ ಮಹನೀಯರಿಗೆ ಪ್ರತಿಷ್ಠಾನದ ಅಧ್ಯಕ್ಷರಾದ ಎಸ್ ಎಮ್ ಕುಲಕರ್ಣಿಯವರು ಅಭಿನಂದಿಸಿ, ಪ್ರಶಸ್ತಿ ಪ್ರದಾನ ಸಮಾರಂಭದ ದಿನಾಂಕ ನಿಗದಿಯಾದ ಮೇಲೆ ತಿಳಿಸಲಾಗುತ್ತದೆ, ದಯಮಾಡಿ ಕಾರ್ಯಕ್ರಮಕ್ಕೆ ಹಾಜರಿದ್ದು ಪ್ರಶಸ್ತಿಯನ್ನು ಸ್ವೀಕರಿಸಬೇಕೆಂದು ಈ ಮೂಲಕ ವಿನಂತಿಸಿರುತ್ತಾರೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ