Kannada NewsKarnataka NewsLatest

ವಿವಿಧೆಡೆ ಆಲೀಕಲ್ಲು ಮಳೆ

ಪ್ರಗತಿವಾಹಿನಿ ಸುದ್ದಿ, ಖಾನಾಪುರ: ತಾಲ್ಲೂಕಿನ ಬೀಡಿ ಹೋಬಳಿಯ ವಿವಿಧೆಡೆ ಭಾನುವಾರ ಸಂಜೆ ಆಲೀಕಲ್ಲು ಮಳೆ ಸುರಿದು ರೈತರಲ್ಲಿ ಆತಂಕ ಸೃಷ್ಟಿಸಿದೆ.

ಬೀಡಿ, ಮಂಗೇನಕೊಪ್ಪ, ಹಿಂಡಲಗಿ, ಗೋಲಿಹಳ್ಳಿ ಹಾಗೂ ಸುತ್ತಮುತ್ತ ಸುರಿದ ಮಳೆಯಿಂದಾಗಿ ಹಸಿಮೆಣಸಿನಕಾಯಿ ಮತ್ತು ತರಕಾರಿ ಬೆಳೆಗಳಿಗೆ ಹಾನಿಯಾಗಿದೆ. ಜೊತೆಗೆ ಈಗಷ್ಟೇ ಹೂವು ಹಾಗೂ ಮಿಡಿಗಾಯಿ ಬಿಡುತ್ತಿದ್ದ ಮಾವು, ಸಪೋಟ ಮತ್ತು ಗೋಡಂಬಿ ಗಿಡಗಳಿಗೆ ಹಾನಿ ಉಂಟಾಗಿದೆ ಎಂದು ರೈತರು ಅಭಿಪ್ರಾಯ ಪಟ್ಟಿದ್ದಾರೆ.

Home add -Advt

ಬೆಳಗಾವಿ ನಗರ ಸೇರಿದಂತೆ ಜಿಲ್ಲೆಯ ಇನ್ನೂ ಹಲವೆಡೆ ಮಳೆಯಾಗಿದೆ.

Related Articles

Back to top button