Kannada NewsKarnataka NewsLatest

*ತಾಯಿಯಿಲ್ಲದ ಬಾಲಕಿಗೆ ದೊಡ್ದಮ್ಮನಿಂದ ಕಿರುಕುಳ; ಇಸ್ತ್ರಿ ಪೆಟ್ಟಿಗೆಯಿಂದ ತೊಡೆ, ಕಾಲನ್ನು ಸುಟ್ಟು ಚಿಂತ್ರಹಿಂಸೆ ನೀಡಿದ ಮಹಿಳೆ*

ಪ್ರಗತಿವಾಹಿನಿ ಸುದ್ದಿ: ತಾಯಿಯಿಲ್ಲದ ಬಾಲಕಿಗೆ ದೊಡ್ಡಮ್ಮ ಚಿತ್ರಹಿಂಸೆ ನೀಡಿ ಅಮಾನವೀಯವಾಗಿ ನಡೆದುಕೊಂಡಿರುವ ಘಟನೆ ತುಮಕೂರು ಜಿಲ್ಲೆಯ ಶಿರಾ ತಾಲೂಕಿನ ನಿಡಗಟ್ಟೆ ಗ್ರಾಮದಲ್ಲಿ ನಡೆದಿದೆ.

5ನೇ ತರಗತಿ ಓದುತ್ತಿದ್ದ ಬಾಲಕಿಯ ತೊಡೆ, ಕಾಲಿನ ಮೇಲೆ ಇಸ್ತ್ರಿ ಪೆಟ್ಟಿಗೆಯಿಂದ ಸುಟ್ಟು ದೊಡ್ಡಮ್ಮ ವಿಕೃತಿ ಮೆರೆದಿದ್ದಾಳೆ. ಇಅಷ್ಟುದಿನ ಶಾಲೆಗೆ ಬರುತ್ತಿದ್ದ ಬಾಲಕಿ ಪರೀಕ್ಷೆಗೆ ಯಾಕೆ ಹಾಜರಾಗಿಲ್ಲ ಎಂದು ಶಿಕ್ಷಕರು ಬಾಲಕಿ ಮನೆಗೆ ಬಂದು ವಿಚಾರಿಸಿದ್ದಾರೆ. ಈ ವೇಳೆ ಘಟನೆ ಬೆಳಕಿಗೆ ಬಂದಿದೆ.

Home add -Advt

ಬಾಲಕಿಗೆ ತಾಯಿ ಇರಲಿಲ್ಲ. ದೊಡ್ಡಮ್ಮನ ಮನೆಯಲ್ಲಿದ್ದುಕೊಂಡು ಶಾಲೆಗೆ ಹೋಗುತ್ತಿದ್ದಳು. ಬಾಲಕಿ ತಾಯಿ ತಾನು ದುಡಿದ 4 ಲಕ್ಷ ಹಣವನ್ನು ಬಾಲಕಿಯ ಬ್ಯಾಂಕ್ ಖಾತೆಯಲ್ಲಿ ಇಟ್ಟಿದ್ದಳು. ಬಾಲಕಿಯ ಖಾತೆಯಲ್ಲಿದ್ದ 4 ಲಕ್ಷದ ಹಣದ ಮೇಲೆ ದೊಡ್ದಮ್ಮಳ ಕಣ್ಣು. ಇದೇ ಕಾರಣಕ್ಕಾಗಿ ಬಾಲಕಿಗೆ ಚೆಕ್ ಗೆ ಸಹಿ ಹಾಕುವಂತೆ ಬಲವಂತ ಮಾಡಿದ್ದಳಂತೆ ದೊಡ್ಡಮ್ಮ ನಜಮ್ಮ. ಆದರೆ ಬಾಲಕಿ ತಾನು ಸಹಿ ಹಾಕಲ್ಲ ಎಂದಿದ್ದಾಳೆ. ಇದರಿಂದ ಕೋಪಗೊಂಡ ದೊಡ್ಡಮ್ಮ ಹಾಗೂ ಆಕೆಯ ಮಗ ಬಸವರಾಜ್ ಬಾಲಕಿ ಮೇಲೆ ಹಲ್ಲೆ ನಡೆಸಿದ್ದಾರೆ.

ಅಲ್ಲದೇ ದೊಡ್ಡಮ್ಮನ ಮಗ ಬಾಲಕಿಯ ಕೈಕಾಲು ಕಟ್ಟಿ, ಬಾಯಿ ಮುಚ್ಚಿಸಿದ್ದು, ದೊಡ್ಡಮ್ಮ ಕಾಯಿಸಿದ ಇಸ್ತ್ರಿ ಪೆಟ್ಟಿಗೆ ತಂದು ಬಾಲಕಿಯ ತೊಡೆ, ಕಾಲಿನ ಮೇಲೆ ಇಟ್ಟು ಸುಟ್ಟಿದ್ದಾಳೆ. ಗಂಭೀರವಾಗಿ ಗಾಯಗೊಂಡಿರುವ ಬಾಲಕಿ ಓಡಾಡಲು ಆಗದೇ ಕಣ್ಣೀರುಡುತ್ತಿದ್ದಾಳೆ. ಆದರೂ ಬಾಲಕಿ ಸ್ಥಿತಿ ಕಂಡು ದೊಡ್ಡಮ್ಮನಿಗೆ ಕರುಣೆ ಬಂದಿಲ್ಲ. ಮನೆಗೆ ಬಂದ ಶಿಕ್ಷಕನ ಬಳಿ ಬಾಲಕಿ ವಿಷಯ ಹೇಳಿಕೊಂಡಿದ್ದು, ಪ್ರಕರಣ ಬೆಳಕಿಗೆ ಬಂದಿದೆ.

Related Articles

Back to top button