Kannada NewsLatest

ಹೊಟೆಲ್ ನಲ್ಲೇ ಇರುತ್ತಿದ್ದ ಕುಮಾರಸ್ವಾಮಿ: ಸಿದ್ದರಾಮಯ್ಯ ಆಕ್ರೋಶ

ಪ್ರಗತಿವಾಹಿನಿ ಸುದ್ದಿ; ಬೆಳಗಾವಿ: ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಆರೋಪದಲ್ಲಿ ಸತ್ಯವಿಲ್ಲ. ಕಣ್ಣೀರು ಹಾಕುವುದು ಅವರ ಸಂಸ್ಕೃತಿ. ಯಾರನ್ನೋ ಓಲೈಸಲು, ನಂಬಿಸಲು ಕಣ್ಣೀರು ಹಾಕುತ್ತಾರೆ ಎಂದು ಸಿದ್ದರಾಮಯ್ಯ ಕಿಡಿಕಾರಿದ್ದಾರೆ.

ಸಿದ್ದರಾಮಯ್ಯ ಪ್ರೀ ಪ್ಲಾನ್ ಟ್ರ್ಯಾಪ್ ಗೆ ಒಳಗಾಗಿ ನಾವು ಸರ್ವನಾಶವಾಗಿದ್ದೇವೆ. ಬಿಜೆಪಿ ಜೊತೆಯಲ್ಲಿದ್ದಿದ್ದರೆ ಇನ್ನೂ ಸಿಎಂ ಆಗಿ ಮುಂದುವರೆಯುತ್ತಿದ್ದೆ ಎಂಬ ಕುಮಾರಸ್ವಾಮಿ ಹೇಳಿಕೆಗೆ ಬೆಳಗಾವಿಯಲ್ಲಿ ಪ್ರತಿಕ್ರಿಯಿಸಿದ ವಿಪಕ್ಷ ನಾಯಕ ಸಿದ್ದರಾಮಯ್ಯ, ಹೆಚ್ ಡಿ ದೇವೇಗೌಡರು ಬೇರೆ ಯಾರನ್ನೂ ಬೆಳೆಸುವುದಿಲ್ಲ. ತಮ್ಮ ಕುಟುಂಬವನ್ನು ಬೆಳೆಸುತ್ತಾರೆ. ಕಾಂಗ್ರೆಸ್ ಜೊತೆ ಕೈಜೋಡಿಸಿದ್ದಕ್ಕಾಗಿ ಕುಮಾರಸ್ವಾಮಿಯವರನ್ನು ಸಿಎಂ ಆಗಿ ಮಾಡಿದೆವು. ಅವರನ್ನು ಸಿಎಂ ಮಾಡಿದೆವಲ್ಲ ಅದು ದ್ರೋಹಾನಾ? ಕುಮಾರಸ್ವಾಮಿಯವರು ಮನೆಯಿಂದ ತಂದು ಅನುದಾನ ಹಂಚಿದರಾ? ಸಿಎಂ ಆಗಿದ್ದರು ಅನುದಾನ ಬಂದಿತ್ತು ಹಂಚಿದರು. ಅವರ ಬೇಜವಾಬ್ದಾರಿ ಹೇಳಿಕೆಗೆ ಉತ್ತರಿಸುವ ಅಗತ್ಯವಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

Home add -Advt

ಕುಮಾರಸ್ವಾಮಿ ಸುಳ್ಳು ಹೇಳುವುದರಲ್ಲಿ ನಿಸ್ಸೀಮ. ಸಮಯಕ್ಕೆ ತಕ್ಕಂತೆ ಸುಳ್ಳು ಹೇಳುತ್ತಾರೆ. ಖಾಸಗಿ ಹೋಟೆಲ್ ನಲ್ಲಿ ಕುಳಿತು ಆಡಳಿತ ನಡೆಸಿದರು. ಶಾಸಕರ ಕೈಗೆ ಸಿಗುತ್ತಿರಲಿಲ್ಲ. ಶಾಸಕರಿಗೆ ಸಹಕಾರ ನೀಡಲಿಲ್ಲ, ಸರ್ಕಾರ ಬಿದ್ದು ಹೋಯ್ತು. ಆದರೆ ಈಗ ಕುಮಾರಸ್ವಾಮಿ ಮಾಡುತ್ತಿರುವ ಆರೋಪದಲ್ಲಿ ಹುರುಳಿಲ್ಲ ಎಂದು ಗುಡುಗಿದರು.

ಕಾಂಗ್ರೆಸ್ ಸಹವಾಸ ಮಾಡಿ, ದೇವೇಗೌಡರ ಮಾತು ಕೇಳಿ ಕೆಟ್ಟೆ – ಎಚ್ ಡಿಕೆ

Related Articles

Back to top button