Kannada NewsLatest

ಬೆಳಗಾವಿ: ನಕಲಿ ವಿದ್ಯಾರ್ಥಿಗಳ ಬಂಧನ

ಪ್ರಗತಿವಾಹಿನಿ ಸುದ್ದಿ; ಬೆಳಗಾವಿ: ಇಂದಿನಿಂದ ಎಸ್.ಎಸ್.ಎಲ್.ಸಿ ಪರೀಕ್ಷೆ ಆರಂಭವಾಗಿದ್ದು, ಇದೇ ವೇಳೆ ಬೆಳಗಾವಿಯಲ್ಲಿ ಪರೀಕ್ಷಾ ಕೇಂದ್ರದಲ್ಲಿ ನಕಲಿ ವಿದ್ಯಾರ್ಥಿಗಳ ಹಾವಳಿಯೂ ಜೋರಾಗಿದೆ.

ಬೆಳಗಾವಿ ಜಿಲ್ಲೆ ಚಿಕ್ಕೋಡಿ ಪಟ್ಟಣದ ಆರ್.ಡಿ.ಕಾಲೇಜಿನ ಪರೀಕ್ಷಾ ಕೇಂದ್ರಕ್ಕೆ ಕೆಲ ನಕಲಿ ವಿದ್ಯಾರ್ಥಿಗಳು ಬೇರೆ ವಿದ್ಯಾರ್ಥಿಗಳ ಪರವಾಗಿ ಪರೀಕ್ಷೆಗೆ ಹಾಜರಾಗಿದ್ದಾರೆ. ಪರೀಕ್ಷೆ ಬರೆಯುತ್ತಿದ್ದ ವೇಳೆ ಅಧಿಕಾರಿಗಳು ಪರಿಶೀಲನೆ ನಡೆಸಿದಾಗ ಓರ್ವ ಯುವತಿ ಸೇರಿ ಐವರು ಸಿಕ್ಕಿಬಿದ್ದಿದ್ದಾರೆ.

Home add -Advt

ಸಿಕ್ಕಿ ಬಿದ್ದ ವರು ನಕಲಿ ವಿದ್ಯಾರ್ಥಿಗಳು ಬಂಧಿಸಲಾಗಿದೆ ಎಂದು ತಿಳಿದುಬಂದಿದೆ. ಬಂಧಿತರನ್ನು ಗೋಕಾಕ್ ತಾಲೂಕಿನ ಗೊಡಗೇರಿ ಗ್ರಾಮದ ರಾಹುಲ್ ಕಿಳ್ಳಿಕೇತರ ಸಾಕಿನ್, ಭಿಮೇಶಿ ಹುಲಿಕುಂದ ವಾಡಿ, ಬಾಗಲಕೋಟೆ ಜಿಲ್ಲೆಯ ಬಿಳಗಿ ತಾಲೂಕಿನ ಕಾರ್ತಿಕ್ ಲಚ್ಚಪ್ಪ ಜಿ.ಕುಂಬಾರ್, ಸಿದ್ದು ಮಾದೇವ್ ಜೋಗಿ, ಮಾಂತೇಶ್ ಸಂಗಪ್ಪ ಹಾಗೂ ಸವಿತಾ ಮಾದೇವ ನಕಲಿ ವಿದ್ಯಾರ್ಥಿಗಳು.
SSLC ಪರೀಕ್ಷೆ ಬರೆಯುತ್ತಲೇ ಸಾವನ್ನಪ್ಪಿದ ವಿದ್ಯಾರ್ಥಿನಿ

Related Articles

Back to top button