Belagavi NewsBelgaum NewsKarnataka NewsLatest

*ಮದುವೆಯಾಗುವುದಾಗಿ ನಂಬಿಸಿ ಕೈಕೊಟ್ಟ ಯುವಕ: ಆರೋಪಿ ಪರ ನಿಂತು ಸಂತ್ರಸ್ತೆಗೆ ಬೆದರಿಕೆ: ಕಾಂಗ್ರೆಸ್ ಮುಖಂಡೆ ವಿರುದ್ಧ ಪ್ರಕರಣ ದಾಖಲು*

ಪ್ರಗತಿವಾಹಿನಿ ಸುದ್ದಿ: ಯುವತಿಯನ್ನು ಮದುವೆಯಾಗುವುದಾಗಿ ನಂಬಿಸಿ, ಲೈಂಗಿಕವಾಗಿ ಬಳಸಿಕೊಂಡು ಕೈಕೊಟ್ಟ ಆರೋಪಿ ಯುವಕನ ಪರ ನಿಂತು ಸಂತ್ರಸ್ತೆಗೆ ಜೀವಬೆದರಿಕೆ ಹಾಕಿದ್ದ ಬೆಳಗಾವಿ ಕಾಂಗ್ರೆಸ್ ನಾಯಕಿ ಆಯೇಶಾ ಸನದಿ ವಿರುದ್ಧ ಮಾಳಮಾರುತಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಯುವತಿಗೆ ಖಾನಾಪ್ಯ್ರ ಮೂಲದ ಬದ್ರುದ್ದೀನ್ ಖಿಲ್ಲೇದಾರ್ ಎಂಬಾತ ಮದುವೆಯಾಗುವುದಾಗಿ ನಂಬಿಸಿ ಲೈಂಗಿಕವಾಗಿ ಬಳಸಿಕೊಂಡಿದ್ದ. ಬಳಿಕ ಮದುವೆಗೆ ಒಪ್ಪದೇ ಮೋಸ ಮಾಡಿದ್ದಾನೆ. ಸಂತ್ರಸ್ತ ಯುವತಿಗೆ ಬೆಳಗಾವಿ ಕಾಂಗ್ರೆಸ್ ಮುಖಂಡೆ ಆಯೇಶಾ ಸನದಿ ಕಿರುಕುಳ ನೀಡಿದ್ದದ್ದಲ್ಲದೇ, ಖಾಸಗಿ ಕ್ಷಣಗಳ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಮಾಡುವುದಾಗಿ ಬೆದರಿಕೆ ಹಾಕಿದ್ದಾಳೆ. ಆಯೇಶಾ ಸನದಿ ಕಿರುಕುಳಕ್ಕೆ ಬೇಸತ್ತ ಸಂತ್ರಸ್ತೆ ನಿದ್ದೆ ಮಾತ್ರೆ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದು ಸಾವು ಬದುಕಿನ ನಡುವೆ ಹೋರಾಟ ನಡೆಸುತ್ತಿದ್ದಾಳೆ.

Home add -Advt

ಯುವತಿ ಪೋಷಕರು ಮಾಳಮಾರುತಿ ಠಾಣೆಯಲ್ಲಿ ಭದ್ರುದ್ದೀನ್ ಖಿಲ್ಲೇದಾರ್ ಹಾಗೂ ಆಯೇಷಾ ಸನದಿ ವಿರುದ್ಧ ದೂರು ದಾಖಲಿಸಿದ್ದಾರೆ. ಮದುವೆಯಾಗುವುದಾಗಿ ಹೇಳಿ ದೈಹಿಕವಾಗಿ ಬಳಸಿಕೊಂಡ ಯುವಕನನ್ನು ನೀನು ಮದುವೆಯಾಗಬಾರದು. ಮದುವೆಯಾದರೆ ನಿನ್ನ ಖಾಸಗಿ ವಿಡಿಯೋಗಳನ್ನು ವೈರಲ್ ಮಾಡುವುದಾಗಿ ಆಯೇಶಾ ಬೆದರಿಕೆಯೊಡ್ದಿದ್ದಾಳೆ ಎಂದು ದೂರು ನೀಡಲಾಗಿದೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಮುಂದುವರೆಸಿದ್ದಾರೆ.

Related Articles

Back to top button