Belagavi NewsBelgaum News

*ಇನ್ ಸ್ಟಾಗ್ರಾಂ ರೀಲ್ಸ್ ನಲ್ಲಿ ಶುರುವಾದ ಪ್ರೀತಿ: ವರ್ಷದ ಹಿಂದಷ್ಟೇ ಮದುವೆ: ಗರ್ಭಿಣಿ ಪತ್ನಿಯ ಬರ್ಬರ ಹತ್ಯೆ*

ಪ್ರಗತಿವಾಹಿನಿ ಸುದ್ದಿ: ಮೂರು ತಿಂಗಳ ಗರ್ಭಿಣಿಯನ್ನು ಪತಿಯೇ ಹತ್ಯೆಗೈದಿರುವ ಘಟನೆ ಬೆಳಗಾವಿ ಹೊರವಲಯದ ಮಚ್ಚೆ ಗ್ರಾಮದಲ್ಲಿ ನಡೆದಿದೆ.

Home add -Advt

ಮಂಜುಳಾ ಅಲಿಯಾಸ್ ನಯನಾ (23) ಕೊಲೆಯಾಗಿರುವ ಗರ್ಭಿಣಿ. ಪ್ರೀತಿಸಿ ವಿವಾಹವಾಗಿದ್ದ ಪತಿ ಬೋರೇಶನೇ ಪತ್ನಿಯನ್ನು ಕೊಲೆ ಮಡಿರುವ ಆರೋಪ ಕೇಳಿಬಂದಿದೆ.

ಮಂಜುಳಾ ಹಾಗೂ ಬೋರೇಶ್ ಇನ್ ಸ್ಟಾಗ್ರಾಂ ನಲ್ಲಿ ಪರಸ್ಪರ ಪರಿಚಯವಾಗಿದ್ದರು. ಮೈಸೂರಿನ ಕುಂಬಾರಕೊಪ್ಪಲಿನ ಮಂಜುಳಾ ರೀಲ್ಸ್ ಮಾಡುತ್ತಾ ಇನ್ ಸ್ಟ್ರಾಗ್ರಾಂ ನಲ್ಲಿ ಸಕ್ರಿಯಳಾಗಿದ್ದಳು. ರೀಲ್ಸ್ ಮೂಲಕ ಇನ್ ಸ್ಟಾಗ್ರಾಂ ನಲ್ಲಿ ಪರಿಚಯಳಾದ ಮಂಜುಳನ್ನು ಬೋರೇಶ್ ಪ್ರೀತಿಸಿದ್ದ. ಬೋರೇಶ್ ಗಾಗಿ ಮಂಜುಳಾ ಮೈಸೂರಿನಿಂದ ಬೆಳಗಾವಿಗೆ ಬಂದಿದ್ದಳು.

ಒಂದು ವರ್ಷದ ಹಿಂದಷ್ಟೇ ಬೋರೇಶ್, ಮಂಜುಳಾಳನ್ನು ವಿವಾಹವಾಗಿದ್ದ, ಮಚ್ಚೆ ಗ್ರಾಮದಲ್ಲಿ ಇಬ್ಬರು ವಾಸವಾಗಿದ್ದರು. ಮಂಜುಳಾ ಮೂರು ತಿಂಗಳ ಗರ್ಭಿಣಿಯಾಗಿದ್ದು, ಬೋರೇಶ್ ಹಾಗೂ ಕುಟುಂಬದವರು ಗರ್ಭಪಾತಕ್ಕೆ ಒತ್ತಾಯಿಸಿದ್ದರು. ಆದರೆ ಗರ್ಭಪಾತಕ್ಕೆ ಮಂಜುಳಾ ಒಪ್ಪಿಲ್ಲ ಎನ್ನಲಾಗಿದೆ. ಇದೇ ಕಾರಣಕ್ಕೆ ಮಂಜುಳಾಳನ್ನು ಪತಿ ಬೋರೇಶ್ ಹಾಗೂ ಕುಟುಂಬದವರು ಉಸಿರುಗಟ್ಟಿಸಿ ಕೊಲೆ ಮಾಡಿ ಪರಾರಿಯಾಗಿದ್ದಾರೆ.

ಬೆಳಗಾವಿ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.


Related Articles

Back to top button