Kannada NewsKarnataka NewsLatest
ಬೆಳಗಾವಿ: ವಿದ್ಯುತ್ ತಂತಿ ಸ್ಪರ್ಶಿಸಿ ಮೂಡಲಗಿ ಬಳಿ ರೈತ ಮಹಿಳೆ ದುರ್ಮರಣ

ಪ್ರಗತಿ ವಾಹಿನಿ ಸುದ್ದಿ, ಬೆಳಗಾವಿ –
ಕಬ್ಬಿನ ತೋಟದಲ್ಲಿ ನಡೆದುಕೊಂಡು ಹೋಗುವ ವೇಳೆ ಜೋತು ಬಿದ್ದಿದ್ದ ವಿದ್ಯುತ್ ತಂತಿ ಸ್ಪರ್ಶಿಸಿ ಸ್ಥಳದಲ್ಲಿಯೇ ರೈತ ಮಹಿಳೆ ಮೃಪಟ್ಟಿರುವ ಘಟನೆ ಕುಲಗೋಡ ಪೋಲೀಸ್ ಠಾಣೆ ವ್ಯಾಪ್ತಿಯಲ್ಲಿ ಶುಕ್ರವಾರ ನಡೆದಿದೆ.
ಮೂಡಲಗಿ ತಾಲೂಕಿನ ಹಳೇಯರಗುದ್ರಿ ಗ್ರಾಮದ ಶೇಖವ್ವಾ ರಾಮಪ್ಪ ಚೌರಡ್ಡಿ (42) ಮೃತ ಮಹಿಳೆ. ಮಹಿಳೆಗೆ ಓರ್ವ ಫುತ್ರಿ ಇದ್ದಾಳೆ.
ಗ್ರಾಮದ ಹೊರ ಭಾಗದ ವಿದ್ಯುತ್ ಸಂಪರ್ಕದ ಮುಖ್ಯ ಲೈನ್ ತಂತಿಗಳು ಜೋತು ಬಿದ್ದು ಹಲವು ದಿನಗಳ ಕಳೆದಿತ್ತು. ಈ ಕುರಿತು ಗ್ರಾಮಸ್ಥರು, ರೈತರು ಹೆಸ್ಕಾಂ ಕುಲಗೋಡ,, ಅರಳಿಮಟ್ಟದ ಕೇಂದ್ರದ ಅಧಿಕಾರಿಗಳಿಗೆ ದೂರು ನೀಡಿದ್ದರು. ಆದರೆ ಅದನ್ನು ಸರಿಪಡಿಸುವ ಕೆಲಸವಾಗಿರಲಿಲ್ಲ.
ಆದರೆ, ಹೆಸ್ಕಾಂ ಸಿಬ್ಬಂದಿ ನಿರ್ಲಕ್ಷ್ಯದಿಂದಾಗಿ ಬಡ ಮಹಿಳೆ ಮೃತಪಟ್ಟಿದ್ದಾಳೆ. ಮಹಿಳೆ ಸಾವಿಗೆ ಹೆಸ್ಕಾಂ ನೇರ ಹೊಣೆ ಎಂದು ಗ್ರಾಮಸ್ಥರು ದೂರಿದ್ದಾರೆ. ಈ ಕುರಿತು ಕುಲಗೋಡ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.




