Kannada NewsKarnataka NewsLatest

ಬೆಳಗಾವಿ: ಕೊರೋನಾಕ್ಕೆ ಪತ್ರಕರ್ತ ಬಲಿ

ಪ್ರಗತಿವಾಹಿನಿ ಸುದ್ದಿ, ಲೋಂಡಾ – ಕೊರೋನಾಕ್ಕೆ ಲೋಂಡಾದ ಪತ್ರಕರ್ತರೋರ್ವರು ಬಲಿಯಾಗಿದ್ದಾರೆ.

ಲೋಂಡಾದ ವಿಜಯಕರ್ನಾಟಕ ವರದಿಗಾರ ಯಲ್ಲಪ್ಪ ಕಾನಾರ (43) ಖಾಸಗಿ ಆಸ್ಪತ್ರೆಯಲ್ಲಿ ಸಾವಿಗೀಡಾಗಿದ್ದಾರೆ.

Home add -Advt

ಕಳೆದ 10 -12 ದಿನದಿಂದ ಜ್ವರದಿಂದ ಬಳಲುತ್ತಿದ್ದ ಅವರನ್ನು ಇಂದು ಬೆಳಗ್ಗೆ ಬೆಳಗಾವಿಯ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಕೆಲವೇ ಹೊತ್ತಿನಲ್ಲಿ ಅವರು ಸಾವನ್ನಪ್ಪಿದರು.

ಈಚೆಗೆ ಭಾರಿ ಮಳೆ ಸುರಿದ ವೇಳೆ ಯಲ್ಲಪ್ಪ ಮಳೆಯಲ್ಲಿ ನೆನೆದಿದ್ದರು. ಮರುದಿನವೇ ಅವರಿಗೆ ಜ್ವರ ಕಾಣಿಸಿಕೊಂಡಿತ್ತು. ಇದು ಮಳೆಯಲ್ಲಿ ನೆನೆದಿದ್ದರಿಂದ ಬಂದಿರುವ ಜ್ವರ ಎಂದು ನಿರ್ಲಕ್ಷಿಸಿದರು.

ಆದರೆ ನಿನ್ನೆಯಿಂದ ಅವರು ತೀವ್ರ ನಿತ್ರಾಣರಾಗಿದ್ದರಿಂದ ಇಂದು ಆಸ್ಪತ್ರೆಗೆ ಕರೆತಂದು ಪರೀಕ್ಷಿಸಿದಾಗ ಕೋವಿಟ್ ಪಾಸಿಟಿವ್ ಬಂದಿದೆ. ಆದರೆ ಸ್ವಲ್ಪಹೊತ್ತಿನಲ್ಲೇ ಅವರು ಮೃತರಾದರು.

ಅವರಿಗೆ ಪತ್ನಿ, ಇಬ್ಬರು ಹೆಣ್ಣು ಮಕ್ಕಳು ಹಾಗೂ ಓರ್ವ ಪುತ್ರ ಇದ್ದಾರೆ.

ಕಳೆದ 20 ವರ್ಷಗಳಿಗೂ ಹೆಚ್ಚು ಕಾಲದಿಂದ ಅವರು ಬಿಡಿ ವರದಿಗಾರರಾಗಿ ಸೇವೆ ಸಲ್ಲಿಸುತ್ತಿದ್ದರು.

ಯಲ್ಲಪ್ಪ ಕಾನಾರ ನಿಧನಕ್ಕೆ ಪ್ರಗತಿವಾಹಿನಿ ತೀವ್ರ ಸಂತಾಪ ವ್ಯಕ್ತಪಡಿಸುತ್ತದೆ. ಅವರ ಕುಟುಂಬಕ್ಕೆ ಸರಕಾರ ಆರ್ಥಿಕ ನೆರವು ನೀಡಬೇಕಾದ ಅನಿವಾರ್ಯತೆ ಇದೆ.

ಎಸ್.ಎಸ್.ಎಲ್.ಸಿ ಫಲಿತಾಂಶ ಪ್ರಕಟ – ಇಲ್ಲಿದೆ ಲಿಂಕ್

Related Articles

Back to top button