Kannada NewsKarnataka NewsLatest

ಬೆಳಗಾವಿ: ನಾಳೆ ಕಿಡ್ನಿ ತಪಾಸಣಾ ಶಿಬಿರ

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಕೆಎಲ್‌ಇ ಸಂಸ್ಥೆಯ ಡಾ. ಪ್ರಭಾಕರ ಕೋರೆ ಆಸ್ಪತ್ರೆ ಮತ್ತು ವೈದ್ಯಕೀಯ ಸಂಶೋಧನಾ ಕೇಂದ್ರದಲ್ಲಿ ವಿಶ್ವ ಕಿಡ್ನಿ ದಿನಾಚರಣೆ ಅಂಗವಾಗಿ ಮೂತ್ರಪಿಂಡ ತಪಾಸಣಾ ಶಿಬಿರವನ್ನು ನಾಳೆ (ಮಾ.9) ಬೆಳಗ್ಗೆ 9 ರಿಂದ ಸಂಜೆ 1 ಗಂಟೆಯವರೆಗೆ ಆಸ್ಪತ್ರೆಯಲ್ಲಿ ಏರ್ಪಡಿಸಲಾಗಿದೆ.

Home add -Advt

ಇದೇ ಸಂದರ್ಭದಲ್ಲಿ ಜಾಗೃತಿ ನಡಿಗೆ ಕಾರ್ಯಕ್ರಮ ಕೂಡ ಆಯೋಜಿಸಲಾಗಿದೆ.

ಶಿಬಿರದಲ್ಲಿ ತಪಾಸಣೆಗೊಳಪಡುವ ಕಿಡ್ನಿ ರೋಗಿಗಳ ರಕ್ತ ಪರೀಕ್ಷೆಯಲ್ಲಿ ಶೇ. 20ರಷ್ಟು ರಿಯಾಯತಿಯನ್ನು ನೀಡಲಾಗುವುದು. ಮೂತ್ರಪಿಂಡವನ್ನು ಸಮಗ್ರವಾಗಿ ಪರೀಕ್ಷಿಸಿ ಸೂಕ್ತ ಸಲಹೆಯನ್ನು ತಜ್ಞವೈದ್ಯರು ನೀಡಲಿದ್ದಾರೆ. ಆದ್ದರಿಂದ ಶಿಬಿರದ ಸದುಪಯೋಗವನ್ನು ಪಡೆದುಕೊಳ್ಳುವಂತೆ ಆಸ್ಪತ್ರೆಯ ವೈದ್ಯಕೀಯ ನಿರ್ದೇಶಕರು ಕೋರಿದ್ದಾರೆ.

ಹೆಚ್ಚಿನ ಮಾಹಿತಿಗಾಗಿ ಕೆಎಲ್‌ಇ ಸಂಸ್ಥೆಯ ಡಾ. ಪ್ರಭಾಕರ ಕೋರೆ ಆಸ್ಪತ್ರೆ ಮತ್ತು ವೈದ್ಯಕೀಯ ಸಂಶೋಧನಾ ಕೇಂದ್ರದ ಜನಸಂಪರ್ಕ ವಿಭಾಗ ಅಥವಾ ದೂ. 0831-2551302 ಅಥವಾ 9141080949 ಇಲ್ಲಿಗೆ ಸಂಪರ್ಕಿಸಲು ಕೋರಲಾಗಿದೆ.

https://pragati.taskdun.com/belagavi-dc-and-sp-visit-polling-stations-infrastructure-review/
https://pragati.taskdun.com/role-of-youth-in-building-a-strong-india-is-important-historian-shivananda-helavara/
https://pragati.taskdun.com/a-woman-tried-to-commit-suicide-by-drinking-phenol-to-her-three-children-in-the-premises-of-the-district-collectors-office/

Related Articles

Back to top button