
ಪ್ರಗತಿವಾಹಿನಿ ಸುದ್ದಿ: ಬೆಳಗಾವಿ: ಬೆಳಗಾವಿ ಪೊಲೀಸ್ ಕಮಿಷನರ್ ಭೂಷಣ್ ಬೊರಸೆ ಅವರು ವರ್ಗಾವಣೆ ಆಗಿರುವ ಬೆನ್ನಲೆ ಐಪಿಎಸ್ ಅಧಿಕಾರಿ ಪ್ರಕಾಶ ನಿಕ್ಕಂ ಅವರು ಅಧಿಕಾರ ಸ್ವೀಕರಿಸಿದರು.
ಇಂದು ನಗರದ ಪೊಲೀಸ್ ಕಮಿಷನರ್ ಕಚೇರಿಗೆ ಆಗಮಿಸಿದ ನೂತನ ಪೊಲೀಸ್ ಕಮಿಷನರ್ ಪ್ರಕಾಶ ನಿಕ್ಕಂ ಅವರಿಗೆ ಪೊಲೀಸ್ ಗೌರವದೊಂದಿಗೆ ಸ್ವಾಗತಿಸಿಲಾಯಿತು. ಬೆಳಗಾವಿಯಿಂದ ಹುಬ್ಬಳ್ಳಿ-ಧಾರವಾಡ ಪೊಲೀಸ್ ಕಮಿಷನರ್‌ಗೆ ವರ್ಗಾವಣೆಯಾಗಿರುವ ಭೂಷಣ ಬೋರಸೆ ಅವರು, ಪ್ರಕಾಶ ನಿಕ್ಕಂ ಅವರಿಗೆ ಅಧಿಕಾರ ಹಸ್ತಾಂತರಿಸಿದರು.

ವೇಳೆ ವೇಳೆ ಬೆಳಗಾವಿ ಎಸ್ ಪಿ ಕೆ ರಾಮರಾಜನ್, ಡಿಸಿಪಿ, ಎಸಿಪಿ, ಸಿಪಿಐಗಳು ಉಪಸ್ಥಿತರಿದ್ದರು.
ಈ ವೇಳೆ ಮಾಧ್ಯಮಗಳ ಜೊತೆ ಮಾತನಾಡಿದ ನೂತನ ಪೊಲೀಸ್ ಕಮಿಷನರ್ ಪ್ರಕಾಶ ನಿಕ್ಕಂ ಅವರು, ಬೆಳಗಾವಿಯಲ್ಲಿ 2014 ರಲ್ಲಿ ಪ್ರೋಬೇಷನರಿ ಆಗಿ ಕೆಲಸ ಮಾಡಿದ್ದೇನೆ. ಭೂಷಣ್ ಬೊರಸೆ ಅವರು ಮಾಡಿರುವ ಕೆಸಲಗಳನ್ನು ಮುಂದುವರೆಸುವೆ. ಜೊತೆಗೆ ನಗರದ ಶಾಂತಿ ಸುವ್ಯವಸ್ಥೆ ಹಾಗೂ ಸಂಚಾರ ದಟ್ಟನೆ ನಿವಾರಣೆಗೆ ಕೆಲಸ ಮಾಡುವೆ ಎಂದು ಭರವಸೆ ನೀಡಿದರು.



