*ಉದ್ಯಮಶೀಲತೆ ಪ್ರೋತ್ಸಾಹಿಸಲು ಭರತೇಶ ಶಿಕ್ಷಣ ಸಂಸ್ಥೆ ದಿಟ್ಟ ಹೆಜ್ಜೆ- ಡಾ. ವೀಣಾ ಕರ್ಚಿ*
ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಸಂಶೋಧನಾ ಮತ್ತು ತಂತ್ರಜ್ಞಾನ ವಿದ್ಯಾರ್ಥಿಗಳಿಗೆ ಅನುಕೂಲವಾಗುವ ಉದ್ದೇಶದೊಂದಿಗೆ ಭರತೇಶ ಇನ್ಸ್ಟಿಟ್ಯೂಟ್ ಆಫ್ ಟೆಕ್ನೋಲಜಿಯು (ಬಿಐಟಿ) ಬೆಳಗಾವಿ ಸ್ಟಾರ್ಟ್ ಅಪ್ಸ್ ಅಸೋಸಿಯೇಷನ್ನೊಂದಿಗೆ (ಬಿ.ಎಸ್.ಎ) ಒಡಂಬಡಿಕೆ ಮಾಡಿಕೊಂಡಿದ್ದು, ಸೋಮವಾರ ಒಡಂಬಡಿಕೆಗೆ ಸಹಿ ಹಾಕಲಾಗಿದೆ ಎಂದು ಭರತೇಶ್ ಶಿಕ್ಷಣ ಸಂಸ್ಥೆಯ ಇಂಜಿನಿಯರಿಂಗ್ ಕಾಲೇಜಿನ ಪ್ರಿನ್ಸಿಪಲ್ ಡಾ. ವೀಣಾ ಕರ್ಚಿ ಅವರು ತಿಳಿಸಿದರು.
ನಗರದ ಭರತೇಶ್ ಶಿಕ್ಷಣ ಸಂಸ್ಥೆಯ ಸಭಾಂಗಣದಲ್ಲಿ ಸೋಮವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬದಲಾಗುತ್ತಿರುವ ಜಗತ್ತಿನಲ್ಲಿ ತಂತ್ರಜ್ಞಾನ ವಿದ್ಯಾರ್ಥಿಗಳಿಗೆ ನೆರವು ಕಲ್ಪಿಸುವ ಹಾಗೂ ಸಂಶೋಧನೆ ಉದ್ಯಮಶೀಲತೆಯನ್ನು ಪ್ರೋತ್ಸಾಹಿಸುವ ಸಲುವಾಗಿ ಈ ಒಡಂಬಡಿಕೆ ಮಾಡಿಕೊಳ್ಳಲಾಗಿದೆ ಎಂದರು.
ಅಗ್ರಿಮಿತ್ರಪ್ಲಗ್-ಇನ್, ಜಬ್ಸಾ ಇನ್ಫೋಟಿಕ್ ಪ್ರೈವೇಟ್ ಲಿಮಿಟೆಡ್, ಬಾಲಲೋಕ ಟಿಕ್ನಾಲಾಜೀಸ್ ಪ್ರೈವೇಟ್ ಲಿಮಿಟೆಡ್ ಸೇರಿದಂತೆ 20ಕ್ಕೂ ಹೆಚ್ಚು ಉದ್ಯಮಗಳು ಬೆಳಗಾವಿ ಸ್ಟಾರ್ಟ್ ಅಪ್ಸ್ ಅಸೋಸಿಯೇಷನ್ ನಲ್ಲಿ ಇದ್ದು, ಇದರಿಂದ ವಿದ್ಯಾರ್ಥಿಗಳಿಗೆ ಹೆಚ್ಚಿನ ಶಿಕ್ಷಣ ಹಾಗೂ ಉದ್ಯೋಗ ಅವಕಾಶಗಳು ಸಿಗಲಿವೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಭರತೇಶ್ ಶಿಕ್ಷಣ ಸಂಸ್ಥೆ 62 ವರ್ಷಗಳಿಂದ ಕಾರ್ಯನಿರ್ವಹಿಸುತ್ತಿದ್ದು, ಬಿಐಟಿಯು ಭರತೇಶ್ ಶಿಕ್ಷಣ ಸಂಸ್ಥೆಯ ಹೊಸ ಅಂಗ ಸಂಸ್ಥೆ ಯಾಗಿದೆ. ಇಲ್ಲಿ 4 ವಿಭಾಗಗಳಲ್ಲಿ ಏಂಜಿನಿಯರಿಂಗ್ ಶಿಕ್ಷಣಕ್ಕೆ ಅವಕಾಶ ಕಲ್ಪಿಸಲಾಗಿದೆ.
ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ ಅಂಡ್ ಮಷೀನ್ ಲರ್ನಿಂಗ್, ಕಂಪ್ಯೂಟರ್ ಸೈನ್ಸ್ ಮತ್ತು ಏಂಜಿನಿಯರಿಂಗ್, ಎಲೆಕ್ಟ್ರಾನಿಕ್ಸ್ ಮತ್ತು ಕಮ್ಯುನಿಕೇಶನ್ ಏಂಜಿನಿಯರಿಂಗ್, ಇನ್ಫೋರ್ಮೆಶನ್ ಸೈನ್ಸ್, ಈ 4 ವಿಷಯಗಳಲ್ಲಿ ವಿದ್ಯಾರ್ಥಿಗಳು ಪದವಿ ಪಡೆದ ನಂತರ ಅವರ ಉದ್ಯಮಶೀಲತೆಗೆ ಅನುಕೂಲವಾಗುವ ನಿಟ್ಟಿನಲ್ಲಿ ತರಬೇತಿ ಸಂಶೋಧನೆ ಮತ್ತು ಮಾರ್ಗದರ್ಶನ ದೊರೆಯಲಿದೆ ಎಂದರು.
ಬೆಳಗಾವಿ ಸ್ಟಾರ್ಟ್ ಅಪ್ಸ್ ಅಸೋಶಿಯೇಷನ್ (ಬಿ.ಎಸ್.ಎ) ಅವರು ಉದಯೋನ್ಮುಖ ಉದ್ಯಮಗಳಿಗೆ ಪ್ರಮುಖ ಸಂಪನ್ಮೂಲವಾಗಿ ಕಾರ್ಯನಿರ್ವಹಿಸುತ್ತಿದೆ. ಆರ್ಥಿಕ ಬೆಳವಣಿಗೆ ಹಾಗೂ ಸ್ಥಳೀಯ ಉದ್ಯಮಶೀಲತೆಯನ್ನು ಬೆಳಸಲು ಹಲವು ಕಾರ್ಯ ಚಟುವಟಿಕೆಗಳನ್ನು ಇಲ್ಲಿ ನಡೆಸುತ್ತಿದೆ ಎಂದರು.
ಭರತೇಶ್ ಶಿಕ್ಷಣ ಸಂಸ್ಥೆಯ (ಬಿಇಟಿ) ಉಪಾಧ್ಯಕ್ಷ ಶ್ರೀಪಾಲ್ ಖೇಮಲಾಪುರೆ, ಜೆಟಿ ಕಾರ್ಯದರ್ಶಿ ಪ್ರಕಾಶ್ ಉಪಾಧ್ಯೆ, ಕೋಶಾಧಿಕಾರಿ ಭೂಷಣ್ ಮಿರ್ಜಿ, ವ್ಯವಸ್ಥಾಪನಾ ಸಮಿತಿ ಸದಸ್ಯ ಅಶೋಕ್ ದನವಾಡೆ, ಬಿಐಟಿ ಆಡಳಿತ ಮಂಡಳಿ ಅಧ್ಯಕ್ಷ ಶಶಾಂಕ್ ಲೆಂಗಡೆ ಮತ್ತು ಸದಸ್ಯ ಡಾ. ಅನಿಲ ಶಿರಹಟ್ಟಿ, ಬಿಐಟಿಯ ಪ್ರಾಚಾರ್ಯ ಡಾ. ವೀಣಾ ಕರ್ಚಿ ಮತ್ತು ಬಿಐಟಿಯ ಆಡಳಿತಾಧಿಕಾರಿ ಡಾ. ಗೋಮಟೇಶ್ ರಾವಣ್ಣವರ್ ಸೇರಿದಂತೆ ಇತರರು ಉಪಸ್ಥಿತರಿದ್ದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ