Latest

ರಾಜ್ಯದಲ್ಲಿ ಬಂದ್ ಇಲ್ಲ; ಜೈಲ್ ಭರೋ

ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ಸೆ. 25ರಂದು ಆಲ್ ಇಂಡಿಯಾ ಕಿಸಾನ್ ಸಮೀತಿ ಕರೆ ನೀಡಿದ್ದ ಭಾರತ್ ಬಂದ್ ಗೆ ನಮ್ಮ ಬೆಂಬಲವಿದೆ. ಆದರೆ ಕರ್ನಾಟಕದಲ್ಲಿ ಬಂದ್ ಇಲ್ಲ, ಜೈಲ್ ಭರೋ ಚಳುವಳಿ ನಡೆಸುವುದಾಗಿ ರಾಜ್ಯ ರೈತ ಸಂಘ ತಿಳಿಸಿದೆ.

ಈ ಕುರಿತು ಮಾಹಿತಿ ನೀಡಿರುವ ರಾಜ್ಯ ರೈತ ಸಂಘದ ಮುಖಂಡರಾದ ಕೋಡಿಹಳ್ಳಿ ಚಂದ್ರಶೇಖರ್ ಹಾಗೂ ಕುರಬೂರು ಶಾಂತಕುಮಾರ್, ಈಗಾಗಲೇ ಕೊರೊನಾದಿಂದಾಗಿ ಹಲವರ ಬದುಕು ಬೀದಿಗೆ ಬಿದ್ದಿದೆ. ಇಂತಹ ಸ್ಥಿತಿಯಲ್ಲಿ ನಾವು ಸಂಪೂರ್ಣ ಬಂದ್ ಆಚರಿಸಿ ಜನರಿಗೆ ಕಷ್ಟಕೊಡುವುದು ಸರಿಯಲ್ಲ. ಹೀಗಾಗಿ ಸೆ.25ರಂದು ಕರ್ನಾಟಕದಲ್ಲಿ ಬಂದ್ ಇರುವುದುಲ್ಲ ಎಂದರು.

Home add -Advt

ಆದರೆ ಕೇಂದ್ರ ಸರ್ಕಾರ ಜಾರಿಗೆ ತರಲು ಹೊರಟಿರುವ ರೈತ ವಿರೋಧಿ ಕಾಯಿದೆ ವಿರುದ್ಧ ನಮ್ಮ ಪ್ರತಿಭಟನೆಯಿದೆ. ಸೆ.25ರಂದು ರಾಜ್ಯ ಹಾಗೂ ರಾಷ್ಟ್ರೀಯ ಹೆದ್ದಾರಿ ಬಂದ್ ಮಾಡಿ ಜೈಲ್ ಭರೋ ಚಳುವಳಿ ನಡೆಸಲಾಗುತ್ತದೆ. ರಾಜ್ಯದ ಪ್ರತಿ ಹಳ್ಳಿ ರೈತರು ತಮ್ಮ ತಮ್ಮ ಗ್ರಾಮಗಳಲ್ಲೇ ಸಾಮಾಜಿಕ ಅಂತರ ಕಾಯ್ದುಕೊಂಡು ಪ್ರತಿಭಟನೆಗಳನ್ನು ನಡೆಸುವ ಮೂಲಕ ಸರ್ಕಾರಕ್ಕೆ ರೈತರ ಶಸ್ತಿ ತೋರಿಸಬೇಕು ಎಂದು ಕರೆ ನೀಡಿದರು.

Related Articles

Back to top button