Kannada NewsKarnataka NewsLatest

*ಸರ್ಕಾರಿ ಆಸ್ಪತ್ರೆ ವೈದ್ಯ ನಾಪತ್ತೆ; ಕಂಗಾಲಾದ ಕುಟುಂಬ*

ಪ್ರಗತಿವಾಹಿನಿ ಸುದ್ದಿ; ಭಟ್ಕಳ; ಸರ್ಕಾರಿ ಆಸ್ಪತ್ರೆಯ ವೈದ್ಯರೊಬ್ಬರು ಏಕಾಏಕಿ ನಾಪತ್ತೆಯಾಗಿರುವ ಘಟನೆ ಉತ್ತರ ಕನ್ನಡ ಜಿಲ್ಲೆಯ ಭಟ್ಕಳದಲ್ಲಿ ನಡೆದಿದೆ.

ಆಸ್ಪತ್ರೆಗೆ ಹೋಗುತ್ತೇನೆ ಎಂದು ಹೇಳಿ ಮನೆಯಿಂದ ಹೊರಟ ವೈದ್ಯ ವಾಪಸ್ ಮನೆಗೆ ಹೋಗಿಲ್ಲ. ಫೋನ್ ಕೂಡ ಸ್ವಿಚ್ಡ್ ಆಫ್ ಇದೆ. ಇದರಿಂದ ಕುಟುಂಬದವರು ಕಂಗಾಲಾಗಿದ್ದಾರೆ.

Home add -Advt

ಡಾ.ಹೆಚ್.ಟಿ.ಉಮೇಶ್ ನಾಪತ್ತೆಯಾಗಿರುವ ಭಟ್ಕಳ ಸರ್ಕಾರಿ ಆಸ್ಪತ್ರೆಯ ಚರ್ಮರೋಗ ವೈದ್ಯ. ಮೂಲತ: ನಿಟ್ಟೂರಿನವರಾದ ಹೆಚ್.ಟಿ.ಉಮೇಶ್ ಭಟ್ಕಳದ ಡಿ.ಪಿ.ಕಾಲೋನಿಯ ಬಾಡಿಗೆ ಮನೆಯಲ್ಲಿ ವಾಸವಾಗಿದ್ದರು.

ವೈದ್ಯ ಉಮೇಶ್ ಗಾಗಿ ಹುಡುಕಾಟ ನಡೆಸಿರುವ ಕುಟುಂಬದವರು ಭಟ್ಕಳ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.


Related Articles

Back to top button