Belagavi NewsBelgaum NewsKannada NewsKarnataka News

*ಬೆಳಗಾವಿಯಲ್ಲಿ ತಪ್ಪಿದ ಭಾರಿ ದುರಂತ: ಬ್ರೇಕ್ ಫೇಲ್ ಆಗಿ ಪಲ್ಟಿಯಾದ ರಾಜಹಂಸ ಬಸ್* 

ಪ್ರಗತಿವಾಹಿನಿ ಸುದ್ದಿ: ಬ್ರೇಕ್ ಫೇಲ್ ಆಗಿ ರಾಜಹಂಸ ಬಸ್ ಪಲ್ಟಿಯಾಗಿರುವ ಘಟನೆ ಬೆಳಗಾವಿ ಜಿಲ್ಲೆಯ ಕಿತ್ತೂರು ತಾಲೂಕಿನ ತಿಮ್ಮಾಪುರ ಬಳಿ ನಡೆದಿದ್ದು, ದೊಡ್ಡ ದುರಂತ ಸ್ವಲ್ಪದರಲ್ಲಿ ತಪ್ಪಿದೆ.‌

20 ಕ್ಕೂ ಹೆಚ್ಚು ಪ್ರಯಾಣಿಕರಿದ್ದ ರಾಜಹಂಸ ಬಸ್ ನ ಬ್ರೇಕ್ ಫೇಲ್ ಆಗಿದೆ.‌ ಹುಬ್ಬಳ್ಳಿಯಿಂದ ಬೆಳಗಾವಿಗೆ ತೆರಳುತ್ತಿದ್ದ ಬಸ್ ನ ಬ್ರೇಕ್‌ ಫೇಲ್ ಆಗಿದೆ. ಇದರಿಂದ ರಸ್ತೆಯ ಪಕ್ಕದಲ್ಲಿದ್ದ ಬ್ಯಾರಿಕೇಡ್‌ಗೆ ಡಿಕ್ಕಿಯಾಗಿ ಬಸ್ ಪಲ್ಟಿಯಾಗಿದೆ. 20ಕ್ಕೂ ಹೆಚ್ಚು ಜನರಿಗೆ ಗಾಯಗಳಾಗಿದ್ದು ಈ ಪೈಕಿ 10 ಮಂದಿಗೆ ಗಂಭೀರ ಗಾಯಗಳಾಗಿವೆ.

ತಕ್ಷಣ ಸ್ಥಳೀಯರು ಬಸ್ ನ ಹಿಂದಿನ ಗಾಜು ಒಡೆದು ಪ್ರಯಾಣಿಕರನ್ನು ಹೊರತರಲು ಸಹಾಯ ಮಾಡಿದ್ದಾರೆ. ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ವಿಷಯ ತಿಳಿದ ಕಿತ್ತೂರು ಠಾಣೆ ಪೊಲೀಸರು ಸ್ಥಳಕ್ಕಾಗಮಿಸಿ ಪರಿಶೀಲನೆ ನಡೆಸಿದ್ದಾರೆ

.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button