Kannada NewsLatestNationalPolitics

*ಕ್ಷಿಪ್ರ ರಾಜಕೀಯ ಬೆಳವಣಿಗೆ: ಸಿಎಂ ಸ್ಥಾನಕ್ಕೆ ನಿತೀಶ್ ಕುಮಾರ್ ರಾಜೀನಾಮೆ ಸಾಧ್ಯತೆ*

ಪ್ರಗತಿವಾಹಿನಿ ಸುದ್ದಿ: ಲೋಕಸಭಾ ಚುನಾವಣೆ ಸಮೀಪಿಸುತ್ತಿರುವ ಬೆನ್ನಲ್ಲೇ ಬಿಹಾರದಲ್ಲಿ ಕ್ಷಿಪ್ರ ರಾಜಕೀಯ ಬೆಳವಣಿಗೆ ನಡೆದಿದೆ. ಜೆಡಿಯು ಹಾಗೂ ಆರ್ ಜೆಡಿ ಮೈತ್ರಿಯಲ್ಲಿ ಒಡಕು ಮೂಡಿದ್ದು, ಮುಖ್ಯಮಂತ್ರಿ ಸ್ಥಾನಕ್ಕೆ ನಿತೀಶ್ ಕುಮಾರ್ ರಾಜೀನಾಮೆ ನೀಡಲು ಮುಂದಾಗಿದ್ದಾರೆ. ಅಲ್ಲದೇ ಎನ್ ಡಿಎ ಮೈತ್ರಿಕೂಟ ಸೇರಲು ನಿರ್ಧರಿಸಿದ್ದಾರೆ.

Home add -Advt

ಇಂದು ಸಂಜೆಯೇ ನಿತೀಶ್ ಕುಮಾರ್ ಸಿಎಂ ಸ್ಥನಕ್ಕೆ ರಾಜೀನಾಮೆ ನೀಡುವ ಸಾಧ್ಯತೆ ಇದ್ದು, ಎನ್ ಡಿಎ ಬೆಂಬಲದೊಂದಿಗೆ ನಾಳೆಯೇ ಮತೆ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ ಎನ್ನಲಾಗುತ್ತಿದೆ.

ಸಿಎಂ ನಿತೀಶ್ ಕುಮಾರ್ ಆರ್ ಜೆಡಿ ಮೈತ್ರಿಯಿಂದ ಹೊರ ಬರುವ ಸಾದ್ಯತೆ ಹಿನ್ನೆಲೆಯಲ್ಲಿ ಆರ್ ಜೆಡಿ ನಾಯಕರು ಲಾಲು ಪ್ರಸಾದ್ ಯಾದವ್ ನಿವಾಸದಲ್ಲಿ ಮಹತ್ವದ ಸಭೆ ನಡೆಸಿದ್ದಾರೆ.


Related Articles

Back to top button