ಪ್ರಗತಿವಾಹಿನಿ ಸುದ್ದಿ: ಸರ್ಕಾರಿ ಉದ್ಯೋಗ ಕೊಡಿಸುವುದಾಗಿ ಆಮಿಷವೊಡ್ಡಿ ಯುವತಿ ಮೇಲೆ ಬಿಜೆಪಿ ಮೇಯರ್ ಅತ್ಯಾಚಾರವೆಸಗಿರುವ ಘಟನೆ ಮಧ್ಯಪ್ರದೇಶದ ಇಂದೋರ್ ನಲ್ಲಿ ನಡೆದಿದೆ.
ಇಂದೋರ್ ಬಿಜೆಪಿ ಮೇಯರ್ ಶಾನು ಅಲಿಯಾಸ್ ನಿತೀಶ್ ಶರ್ಮಾ ವಿರುದ್ಧ 32 ವರ್ಷದ ಯುವತಿ ಅತ್ಯಾಚಾರ ಆರೊಪ ಮಡಿದ್ದು, ಮೇಯರ್ ವಿರುದ್ಧ ಎಫ್ ಐಆರ್ ದಾಖಲಾಗಿದೆ.
2023ರ ಮೇ 10ರಿಂದ 2024ರ ಏಪ್ರಿಲ್ 16ವರೆಗೆ ತನ್ನ ಮೇಲೆ ಲೈಂಗಿಕ ದೌರ್ಜನ್ಯ ವೆಸಗಲಾಗಿದೆ ಎಂದು ಯುವತಿ ದೂರಿದ್ದಾರೆ.
ಆರ್ಥಿಕವಾಗಿ ಸಂಕಷ್ಟದಲ್ಲಿದ್ದ ಸಂತ್ರಸ್ತೆಗೆ ಬ್ಯಾಂಕ್ ನಲ್ಲಿ 1 ಲಕ್ಷ ಸಾಲವಿತ್ತಂತೆ. ಕೊರೊನಾ ಸಂದರ್ಭದಲ್ಲಿ ಇಂದೋರ್ ನ ದ್ವಾರಕಾಪುರಿ ವಾರ್ಡ್ ನ ಬಿಜೆಪಿ ಕೌನ್ಸಿಲರ್ ಶಾನು ಶರ್ಮಾ ಬಳಿ ಸಹಾಯ ಕೇಳಿದ್ದರಂತೆ. ಈ ವೇಳೆ 1 ಲಕ್ಷ ಹಣ ನೀಡಿ ಸಹಾಯ ಮಾಡಿದ್ದರಂತೆ. ಅಲ್ಲದೇ ಸರ್ಕಾರಿ ಕೆಲಸ ನೀಡುವುದಾಗಿಯೂ ಭರವಸೆ ನೀಡಿದ್ದರಂತೆ.
ಬಳಿಕ ಶಾನು ಶರ್ಮಾ ನಿನ್ನ ಗೆಳೆಯನಿಂದ ನೀನು ದೂರವಿರಬೇಕು ಎಂದು ಹೇಳಿದ್ದರಂತೆ. ಅದಕ್ಕೆ ಯುವತಿ ನಿರಾಕರಿಸಿದಾಗ ತಾನು ಕೊಟ್ಟ 1 ಲಕ್ಷ ಹಣ ವಾಪಸ್ ನೀಡುವಂತೆ ಕೇಳಿದ್ದರಂತೆ. ಕಷ್ಟಪಟ್ಟು 50 ಸಾವಿರ ಹಣ ವಾಪಸ್ ನೀಡಿದ್ದಾಗಿ ಯುವತಿ ದೂರಿನಲ್ಲಿ ಉಲ್ಲೇಖಿಸಿದ್ದಾರೆ. ಉಳಿದ ಹಣವನ್ನು ವಾಪಾಸ್ ಕೊಡುತ್ತೇನೆ ಸ್ವಲ್ಪ ಸಮಯ ನೀಡುವಂತೆ ಯುವತಿ ಕೇಳಿದ್ದಳಂತೆ. ಬಳಿಕ ಕಿರುಕುಳ ನೀಡಲು ಆರಂಭಿಸಿದ್ದ ಶಾನು ಶರ್ಮಾ, ಅತ್ಯಾಚಾರವೆಸಗಿದ್ದಾಗಿ ದೂರಿದ್ದಾರೆ. ಘಟನೆ ಬಳಿಕ ದ್ವಾರಕಾಪುರಿಯಲ್ಲಿರುವ ತನ್ನ ಕಚೇರಿಯಲ್ಲಿಯೇ ಶಾನು ಶರ್ಮಾ ಕೆಲಸ ಕೊಟ್ಟಿದ್ದ. ಅಲ್ಲಿಯೂ ಹಲವು ಬಾರಿ ದೌರ್ಜನ್ಯವೆಸಗಿದ್ದಾರೆ. ಕೆಲ ದಿನಗಳಲ್ಲೇ ಕೆಲಸದಿಂದ ವಜಾಗೊಳಿಸಿದರು. ಇದೇ ರೀತಿ ಹಲವು ಮಹಿಳೆಯರ ಮೇಲೆ ಶಾನು ಶರ್ಮಾ ದೌರ್ಜನ್ಯವೆಸಗಿದ್ದಾಗಿ ಸಂತ್ರಸ್ತೆ ದೂರು ನೀಡಿದ್ದಾರೆ.
ಭಾರತೀಯ ದಂಡ ಸಂಹಿತೆ ಸೆಕ್ಷನ್ 376, 376 (2) (ಎನ್) ಹಾಗೂ 506 ಅಡಿಯಲ್ಲಿ ಎಫ್ ಐ ಆರ್ ದಾಖಲಾಗಿದೆ. ಆದರೆ ಈವರೆಗೂ ಆರೋಪಿ ಬಂಧನವಾಗಿಲ್ಲ ಎಂದು ತಿಳಿದುಬಂದಿದೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ