Cancer Hospital 2
Beereshwara 36
LaxmiTai 5

ಬಿಜೆಪಿಗೆ ನಿರೀಕ್ಷಿಸಿದಷ್ಟು ಸ್ಥಾನಗಳು ದೊರೆತಿಲ್ಲ: ಪ್ರಲ್ಲಾದ ಜೋಷಿ

Anvekar 3
GIT add 2024-1

ಪ್ರಗತಿವಾಹಿ‌ನಿ ಸುದ್ದಿ : ಈ ಬಾರಿ ಬಿಜೆಪಿಗೆ ಅಪೇಕ್ಷಿಸಿದಷ್ಟು ಸ್ಥಾನಗಳು ದೊರೆತಿಲ್ಲ. ಇನ್ನೂ ಉತ್ತರ ಭಾರತದ ಹಲವೆಡೆ ಚುನಾವಣಾ ಮತದಾನ ಎಣಿಕೆ ಪ್ರಕ್ರಿಯೆ ಬಾಕಿಯಿದೆ. ಈ ಬಗ್ಗೆ ಬಳಿಕ ಮಾತನಾಡುವುದು ಸೂಕ್ತ ಎಂದು ಬಿಜೆಪಿ ಸಚಿವ ಪ್ರಲ್ಹಾದ್‌ ಜೋಷಿ ಹೇಳಿದ್ದಾರೆ. 

ಮಂಗಳವಾರ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಕರ್ನಾಟಕದಲ್ಲಿ ಬಿಜೆಪಿ ಮತ್ತು ಜೆಡಿಎಸ್‌ ಮೈತ್ರಿಗೆ ಈ ಬಾರಿ ಕಡಿಮೆಯೆಂದರೂ 18-20 ಸ್ಥಾನಗಳು ಲಭ್ಯವಾಗಲಿದೆ. ಗ್ಯಾರೆಂಟಿ ಯೋಜನೆಗಳು ಕಾಂಗ್ರೆಸ್‌ ಸರ್ಕಾರದ ಕೈ ಹಿಡಿದಿದೆಯೇ ಎಂಬುದಕ್ಕೆ ಇದು ಉತ್ತರವಾಗಬಲ್ಲದು. ಮತ ಎಣಿಕೆ ಸಂಪೂರ್ಣವಾಗಿ ಮುಗಿದ ಬಳಿಕ ಬಿಜೆಪಿ ಇನ್ನೂ ಎರಡು ಸ್ಥಾನಗಳಿಸುವ ಸಾಧ್ಯತೆಗಳಿವೆ ಎಂದು ಪ್ರಲ್ಹಾದ್‌ ಜೋಷಿ ಹೇಳಿದರು.

Emergency Service

ಈ ಬಾರಿ ದಿಂಗಾಲೇಶ್ವರ ಸ್ವಾಮಿ ಪ್ರಲ್ಹಾದ್‌ ಜೋಷಿ ವಿರುದ್ದ ತೊಡೆ ತಟ್ಟಿದ್ದರು. ಅವರಿಗೆ ಕಾಂಗ್ರೆಸ್‌ ಟಿಕೆಟ್‌ ನೀಡದ ಬಳಿಕ ಸ್ವತಂತ್ರ್ಯ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿ ಬಳಿಕ ನಾಮಪತ್ರ ಹಿಂಪಡೆದಿದ್ದರು. ಹೀಗಾಗಿ ಹುಬ್ಬಳ್ಳಿ ಲೋಕಸಭಾ ಕ್ಷೇತ್ರ ಸಹಜವಾಗಿ ಗಮನ ಸೆಳೆದಿತ್ತು.

Bottom Add3
Bottom Ad 2