Election NewsKannada NewsKarnataka NewsNationalPolitics

*ಬಿಜೆಪಿಯವರಲ್ಲಿ ಬರೀ ಸೇಡು, ದ್ವೇಷ ತುಂಬಿದೆ: ಡಿಕೆ ಶಿವಕುಮಾರ ವಾಗ್ದಾಳಿ*

ಪ್ರಗತಿವಾಹಿನಿ ಸುದ್ದಿ: ಬಿಜೆಪಿಯವರಲ್ಲಿ ಬರೀ ಸೇಡು, ದ್ವೇಷ ತುಂಬಿದೆ. ಬಿಜೆಪಿ ವಿರುದ್ಧ ನೀಡಿರುವ ಜಾಹೀರಾತು ಸಂಬಂಧ ಅದರಲ್ಲಿ ರಾಹುಲ್ ಗಾಂಧಿ ಪಾತ್ರವೇನಿದೆ? ಈ ರೀತಿಯ ಅಪಪ್ರಚಾರದ ಮಾಡಿರುವ ಬಿಜೆಪಿಯವರ ಅನೇಕ ಪ್ರಕರಣಗಳ ಪಟ್ಟಿ ನಮ್ಮ ಬಳಿ ಇವೆ. ಸಮಯ ಬಂದಾಗ ಹೊರಗಿಡುತ್ತೇವೆ ಎಂದು ಡಿಸಿಎಂ ಡಿ.ಕೆ ಶಿವಕುಮಾರ ಕಿಡಿ ಕಾರಿದರು.

ನಗರದ ಖಾಸಗಿ ಹೋಟೆಲ್​​​​ನಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಬೇಕು ಅಂತಲೇ ರಾಹುಲ್ ಗಾಂಧಿ ಅವರನ್ನು ಬಿಜೆಪಿಯವರು ಟಾರ್ಗೆಟ್ ಮಾಡಿದ್ದಾರೆ. ಇನ್ನು ಇಂದು ಕೋರ್ಟ್​​ಗೆ ವಿಚಾರಣೆ ಹಾಜರಾದ ಸಂಸದ ರಾಹುಲ್ ಗಾಂಧಿ ಅವರು ಬಳಿಕ ನೂತನ ಸಂಸದರನ್ನು ಭೇಟಿಯಾಗಿ ಅಭಿನಂದಿಸಿದರು. ಮುಂದೆ ಯಾವ ರೀತಿ ಕೆಲಸ ಮಾಡಬೇಕು. ಕೇಂದ್ರದಿಂದ ರಾಜ್ಯಕ್ಕೆ ಆಗಿರುವ ಅನ್ಯಾಯದ ಬಗ್ಗೆ ಹೋರಾಡಲು ಸಿದ್ಧತೆ ಮಾಡಿ ಎಂದು ಸಲಹೆ ನೀಡಿದರು ಎಂದು ತಿಳಿಸಿದರು. 

ಲೋಕಸಭೆ ಚುನಾವಣೆಯಲ್ಲಿ ಸಚಿವರ ಕ್ಷೇತ್ರದಲ್ಲಿ ಕಡಿಮೆ ಲೀಡ್ ಬಂದಿರುವ ಮತ್ತು ಕಾಂಗ್ರೆಸ್ ಅಭ್ಯರ್ಥಿಗಳ ಸೋಲಿನ ಬಗ್ಗೆ ತಮಗೂ, ಸಿಎಂ ಸಿದ್ದರಾಮಯ್ಯ ಹಾಗೂ ಮಂತ್ರಿಗಳಿಗೂ ವರದಿ ನೀಡುವಂತೆ ರಾಹುಲ್ ಗಾಂಧಿ ನಿರ್ದೇಶನ ನೀಡಿದ್ದಾರೆಂದು ಡಿಕೆಶಿ ವಿವರಿಸಿದರು. ವರದಿ ನೀಡುವ ಮುನ್ನ ಮತ್ತೊಮ್ಮೆ ಎಲ್ಲಾ ಸಚಿವರು, ಶಾಸಕರೊಂದಿಗೆ ಸಭೆ ನಡೆಸಲಾಗುವುದು ಎಂದು ಹೇಳಿದರು.

Home add -Advt

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button